ಚಂದಾಪುರ: ಮಹಿಳೆ ಎಂದರೆ ವ್ಯಕ್ತಿ ಮಾತ್ರ ಅಲ್ಲ ಶಕ್ತಿಯ ಸ್ವರೂಪ ಎಂದು ಯಲ್ಲಮ್ಮ ದೇವಿ ಟ್ರಸ್ಟ್ ನ ಅಧ್ಯಕ್ಷ ಬಳಗಾರನಹಳ್ಳಿ ಕುಮಾರ್ ತಿಳಿಸಿದರು.
ಅವರು ಚಂದಾಪುರಲ್ಲಿ ಕಾರಂಜಿ ಯುವಜನ ಸೇವಾ ಸಂಸ್ಥೆ ಹಾಗೂ ಯಲ್ಲಮ್ಮ ದೇವಿ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಹಾಕಿಕೊಂಡಿದ್ದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಹೆಚ್ಚುವರಿ ಅಭ್ಯಾಸ ಪಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿ ಹಾಗೂ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಪುರುಷರು ಜೀವನದಲ್ಲಿಯೂ ಹೆಣ್ಣು ವಿವಿಧ ರೂಪಗಳಲ್ಲಿ ಮಹತ್ವ ಪಾತ್ರವನ್ನು ನಿರ್ವಹಿಸುತ್ತಾರೆ ,ತಾಯಿಯಾಗಿ,ಸಹೋದರಿಯಾಗಿ ,ಹೆಂಡತಿಯಾಗಿ ಹಾಗೂ ಮಗಳಾಗಿ ಬದುಕಲ್ಲಿ ಬೆಳಕಾಗಿ ಬರುವಳೆ ಹೆಣ್ಣು ಎಂದರುಮಹಿಳೆಯರಿಗೆ ರಾಜಕೀಯ ಶಕ್ತಿ ಬೇಕು:- ಕಾರಂಜಿ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಟಿ.ಎಂ. ಮಾತನಾಡುತ್ತ ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶಗಳನ್ನು ಹೆಸರಿಗೆ ಮಾತ್ರ ನೀಡಲಾಗುತ್ತಿದೆ ಆದರೆ ಆಡಳಿತದ ಕಾರ್ಯವನ್ನು ಪುರುಷರು ಮಾಡುತ್ತಾರೆ ಇದು ವ್ಯವಸ್ಥೆಯ ಲೋಪವಾಗಿದ್ದು ಮಹಿಳೆಯರಿಗೆ ಸಂಪೂರ್ಣವಾಗಿ ಜವಾಬ್ದಾರಿ ಮತ್ತು ಕರ್ತವ್ಯ ಪಾಲನೆಗೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಅವರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಗೌರವಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷ ಗೌರೀಶ್, ಸಮಾಜ ಸೇವಕ ಗುಡ್ಡಹಟ್ಟಿ ರಾಮಸ್ವಾಮಿ,ಮಹಿಳಾ ಹೋರಾಟಗಾತಿ ಮಮತಾ ಯಜಮಾನ್,ವಿಜಯಕುಮಾರಿ, ಜಯರಾಮ್ ಸರ್ಜಾ, ಸಂಶೋಧಕಿ ಗೌರಮ್ಮ, ಸೂರ್ಯಸಿಟಿ ವೃತ್ತ ನಿರೀಕ್ಷಕಎಸ್.ಮಹಾಜನ್, ಚಂದಾಪುರ ಶ್ರೀಧರ್, ರತ್ನಮ್ಮ, ಭಾರತಿ ಕುಮಾರ್, ಆನಂದ್, ಶಶಿಕುಮಾರ್, ಕಾರಂಜಿ ಯುವಜನ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಯಲ್ಲಮ್ಮ ದೇವಿ ಟ್ರಸ್ಟ್ ನ ಕಾರ್ಯಕಾರಿ ಸದಸ್ಯರು ಹಾಜರಿದ್ದರು.