ಮಾಗಡಿ: ಕಳೆದ ಬಿಜೆಪಿ ಸರಕಾರದಲ್ಲಿ ತಿರುಮಲೆಯ ಶ್ರೀ ರಂಗನಾಥಸ್ವಾಮಿಯ ದೇವಾಲಯ ಅಭಿವೃದ್ಧಿಗೆ ಐದು ಕೋಟಿ ಮೀಸಲಿಟ್ಟ ಹಣವನ್ನು ಹಿಂಪಡೆಯಲಾಗಿತ್ತು.ನಾವು ಹೋರಾಟ ಮಾಡಿ ಪುನಃ ಐದು ಕೋಟಿ ಹಣವನ್ನು ಮಂಜೂರಿ ಮಾಡಿಸಲಾಗಿದ್ದು ಈ ಹಣದಲ್ಲಿ ಶ್ರೀ ರಂಗನ ಕ್ಷೇತ್ರಾಭಿವೃದ್ದಿ ಮಾಡಲಾಗುವುದು ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ತಿರುಮಲೆ ಶ್ರೀ ರಂಗನಾಥಸ್ವಾಮಿಯ ವಿಷ್ಣು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಂಡವ್ಯ ಮಹರ್ಷಿಗಳ ತಪೋಭೂಮಿ ಮಾಗಡಿಯ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ಕ್ಷೇತ್ರಾಭಿವೃದ್ದಿಗೆ ನಾವು ಬದ್ದರಾಗಿದ್ದು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಂಜೂರಾಗಿರುವ ಐದು ಕೋಟಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲು ಈಗಾಗಲೇ ಸಂಭಂದಿಸಿದ ಎಂಜಿನಿಯರ್ ಬಳಿಯಲ್ಲಿ ಚರ್ಚಿಸಲಾಗಿದ್ದು ದೇವಾಲಯದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಬೇಕಿದೆ ಎಂದು ಇಲ್ಲಿನ ಅರ್ಚಕರ ಬಳಿಯಲ್ಲಿ ಸಮಾಲೋಚನೆ ನಡೆಸಿ ಇನ್ನೊಂದು ತಿಂಗಳಲ್ಲಿ ಕಾಮಗಾರಿ ಕೆಲಸ ಪ್ರಾರಂಭಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದುಎಂದು ಬಾಲಕೃಷ್ಣ ತಿಳಿಸಿದರು.
ಪುರಸಭಾ ಮಾಜಿ ಅದ್ಯಕ್ಷರು ಹಾಲಿ ಸದಸ್ಯರಾದಹೆಚ್.ಜೆ.ಪುರುಷೋತ್ತಮ್ ಮಾತನಾಡಿ ಕಳೆದ ಇಪ್ಪತೈದು ವರ್ಷಗಳ ಹಿಂದೆ ಪ್ರಾರಂಭವಾದ ಲಕ್ಷದೀಪೋತ್ಸವವು ಯಾವುದೇ ಅಡೆ ತಡೆಗಳಿಲ್ಲದೆ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ.ತಾಲ್ಲೂಕಿನ
ಆರಾದ್ಯ ದೇವನಾದ ತಿರುಮಲೆ ಶ್ರೀ ರಂಗನಾಥಸ್ವಾಮಿಯನ್ನು ಭಕ್ತಿಯಿಂದ ನೆನೆದುಕೊಂದು ಪೂಜಿಸಿದರೆ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುತ್ತಾನೆ ಎಂದು ಪುರುಷೋತ್ತಮ್ ಹೇಳಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭಾ ಸದಸ್ಯ ಶಿವಕುಮಾರ್, ಅರ್ಚಕರಾದ ವೆಂಕಟೇಶ್ ಅಯ್ಯಂಗಾರ್, ಕಾರ್ತಿಕ್ ಅಯ್ಯಂಗಾರ್, ಗೋವಿಂದರಾಜು, ಟಿಎಪಿಸಿಎಂಎಸ್ ನಿರ್ದೇಶಕ ಎಂ.ರವೀಶ್, ಗುತ್ತಿಗೆದಾರ ದೇವರಾಜು, ಪುರಸಭೆ ಮಾಜಿ ಸದಸ್ಯ ಶೇಖರ್, ಉಮಾಪತಿ, ಶಿವಕುಮಾರ್, ಬೋಡು ರಂಗನಾಥ್, ಕಲ್ಲು ಕೃಷ್ಣಪ್ಪ, ಮಂಜಪ್ಪಿ, ಪ್ರಕಾಶ್, ಬೈಚಾಪುರ ಕಿರಣ್, ಹನುಮಂತಪುರ ಶಿವು, ಮಾಗಡಿ ರಂಗಯ್ಯ ಸೇರಿದಂತೆ ಮತ್ತಿತರಿದ್ದರು.