This is the title of the web page
This is the title of the web page

ಬಲಿ ಕಂಬ ಪ್ರತಿಷ್ಠಾಪನಾ ಪೂಜೆ

ಹನೂರು: ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಆದಿಶಕ್ತಿ ಶ್ರೀ ಕೋಣನ ಮಾರಮ್ಮ ಜಾತ್ರಾ ಮಹೋತ್ಸವ 8ನೇ ದಿನವಾದ ಮಂಗಳವಾರ ಬಲಿ ಕಂಬ ಪ್ರತಿಷ್ಠಾಪನಾ ಪೂಜಾ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಜಾತ್ರೆಯ ಸಂಪ್ರದಾಯದಂತೆ ತಾಲ್ಲೂಕಿನ ಮಂಗಲ, ಕಾಮಗೆರೆ -ಮೋಡಳ್ಳಿ, ಬಿ.ಗುಂಡಾಪುರ, ಹನೂರು, ಕಣ್ಣುರು ಗ್ರಾಮಗಳ ಜನತೆ ಬಲಿ ಕಂಬವನ್ನು ಮಂಗಳ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಹೊತ್ತು ತಂದರು. ಬಲಿಕಂಬವನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಮಂಗಲ ಗ್ರಾಮದ ಯಜಮಾನರು, ಮುಖಂಡರುಗಳು ಸೇರಿದಂತೆ ವಿವಿಧ ಗ್ರಾಮಗಳ ಯಜಮಾನರುಗಳು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.