ಬೆಂಗಳೂರು: 18ನೇ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತ ಹಾಕಿದ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗಳನ್ನು ನಗರದ ಮೂರು ಕಾಲೇಜುಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೊಂದಿಗೆ ಇಡಲಾಗಿದೆ.
ಸುಮಾರು ಐದು ಹಂತದ ಸೆಕ್ಯೂರಿಟಿ ಚೆಕ್ ನೊಂದಿಗೆ ಈ ಬಾಕ್ಸ್ ಗಳನ್ನು ಇಡಲಾಗಿದೆ. ಈ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗಳನ್ನು ಕಾಯಲು ಕೇಂದ್ರೀಯ ಮೀಸಲು ಪಡೆ ಸೇರಿದಂತೆ ನಗರ ಪೊಲೀಸರನು ಸಹ ಸಜ್ಜುಗೊಳಿಸಲಾಗಿದೆ.ಪೊಲೀಸರ ಪಹರೆಯನ್ನು ಮೂರು ಶಿಫ್ಟ್ ಗಳನ್ನಾಗಿ ವರ್ಗೀಕರಿಸಲಾಗಿದೆ. ಸುಮಾರು ಒಂದು ಶಿಫ್ಟಿಗೆ ಪ್ರತಿ ಕೌಂಟಿಂಗ್ ಸೆಂಟರ್ಗೆ 200 ಪೊಲೀಸರನ್ನು ಹೆಚ್ಚು ಕಡಿಮೆ ಅರ್ಧ ಕಿಲೋಮೀಟರ್ ವರೆಗೂ ಮತ್ತು ಬ್ಯಾರಿಕೇಡ್ಗಳನ್ನು ಸಹ ಹಾಕಲಾಗಿದೆ.
5 ಸೆಕ್ಟರ್ ಆಫೀಸರ್ ಗಳನ್ನು ಸಹ ನೇಮಿಸಲಾಗಿದೆ.ಸುಮಾರು ನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪ್ರತಿ ಸ್ಟ್ರಾಂಗ್ ರೂಮಗಳಲಿ ಮತ್ತು ಸುತ್ತಮುತ್ತ ಅಳವಡಿಸಲಾಗಿದೆ. ಸೇಂಟ್ ಜೋಸೆಫ್ ಕಾಲೇಜ್, ಮೌಂಟ್ ಕಾರ್ಮೆಲ್ ಕಾಲೇಜು ಮತ್ತು ಎಸ್ ಎಸ್ ಎಮ್ ಆರ್ ವಿ ಕಾಲೇಜುಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ಗಳನ್ನು ಇಡಲಾಗಿದೆ. 8088 ಮತಗಟ್ಟೆಗಳಲ್ಲಿ ಸಾರ್ವಜನಿಕರು ನಿನ್ನೆ ಮತಗಳನ್ನು ಚಲಾಯಿಸಿದ್ದರು.ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ತಕ್ಷಣ ಕಾರ್ಯಪವೃತ್ತರಾಗಲು ಅಗ್ನಿಶಾಮಕ ಪಡೆಯನ್ನು ಹಾಗೂ ಸ್ವಾನದಳ ಮತ್ತು ಇತರೆ ವ್ಯವಸ್ಥೆಗಳನ್ನು ಸಹ ಮಾಡಿರುತ್ತಾರೆ.