ಹನೂರು: ಗುರುವಾರ ಸಂಜೆ ಸುರಿದ ಗಾಳಿ ಮಳೆಗೆ 5 ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ನೆಲಕಚ್ಚಿ ಸುಮಾರು 18 ಲಕ್ಷ ನಷ್ಟವಾಗಿರುವ ಘಟನೆ ದೊಡ್ಡಿಂದುವಾಡಿ ಗ್ರಾಮದಲ್ಲಿ ಜರುಗಿದೆ.
ಗುರುವಾರ ಸಂಜೆ ಸುಮಾರು 4 ಗಂಟೆಯಲ್ಲಿ ಪ್ರಾರಂಭವಾದ ಗಾಳಿ ಮಳೆ ಸುಮಾರು ಒಂದು ಗಂಟೆಗಳ ಕಾಲ ಬಿದ್ದ ಪರಿಣಾಮ ಪಾಳ್ಯ ಹೋಬಳಿ ಸರ್ವೆ ನಂಬರ್ 285 ರಲ್ಲಿನ ಅಜಯ್ ಹಾಗೂ ಕಾರ್ತಿಕ್ ಎಂಬುವರಿಗೆ ಸೇರಿದ ಬಾಳೆ ಗೊನೆ ಬಿಡುವ ಹಂತಕ್ಕೆ ಬಂದಿತ್ತು, ಏಕಾಯಕಿ ಬೀಸಿದ ಗಾಳಿ ಮಳೆಗೆ 5 ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಸಂಪೂರ್ಣ ನೆಲೆ ಕಚ್ಚಿರುವುದರಿಂದ ಸುಮಾರು 18 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡುವಂತೆ ಅಜಯ್ ರವರ ತಂದೆ ರಾಚಪ್ಪಾಜಿ ಒತ್ತಾಯಿಸಿದ್ದಾರೆ.
ಏಕಾಏಕಿ ಗಾಳಿ ಮಳೆ ಬಿದ್ದ ಹಿನ್ನೆಲೆ ದೊಡ್ಡಿಂದುವಾಡಿ ಗ್ರಾಮದಿಂದ ತೆಳ್ಳನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರಿಳಿದ ಪರಿಣಾಮ ಒಂದು ತಳ್ಳುವ ಗಾಡಿ ಹಾಗೂ ಕಾರು ಜಖಂಗೊಂಡಿದೆ.
Leave a Review