ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದ ಪ್ರಕರಣ ಸಂಬಂಧ ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಖಂಡಿಸಿ ಇಂದು ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಖಾಂಡ್ಯ ಹೋಬಳಿ ಬಂದ್ಗೆ ಕರೆ ನೀಡಲಾಗಿದೆ.
ರೈತ ಸಂಘಟನೆಗಳು ಬೆಳಗ್ಗೆ ೮ರಿಂದ ಸಂಜೆ ೫ರತನಕ ಬಂದ್ಗೆ ಕರೆ ನೀಡಿದ್ದು, ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋಚಾಲಕರು, ಮಾಲೀಕರ ಸಂಘ, ಬಿಜೆಪಿಯಿಂದ ಬಂದ್ಗೆ ಬೆಂಬಲ ನೀಡಿವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಆಗಿದ್ದು, ಬೆಳಿಗ್ಗೆ ೧೧ ಗಂಟೆಗೆ ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದು, ಸರ್ಕಾರದ ವಿರುದ್ಧ ಹೋರಾಟ ಇಂದೂ ಕೂಡ ಮುಂದುವರೆಯಲಿದೆ. ಒಂದು ವರ್ಷದಲ್ಲಿ ಕಾಡು ಪ್ರಾಣಿಗಳ ದಾಳಿಗೆ ೧೩ ಮಂದಿ ಬಲಿಯಾಗಿದ್ದು, ಒಂದು ವಾರದ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಕೂಡ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಮಲೆನಾಡಿಗರಿಗೆ ಸ್ವಾಂತನ ಹೇಳೋಕು ಬರುತ್ತಿ ಎಂದು ಕಿಡಿಕಾಡಿದ್ದಾರೆ.
ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಕಾಡುಪ್ರಾಣಿಗಳು ನಿರಂತರ ದಾಳಿ ಮಾಡ್ತಿದ್ರು ದಿವ್ಯ ನಿರ್ಲಕ್ಷ ವಹಿಸಿದ್ದಾರೆ. ಆನೆ ಶಿಬಿರ, ರೈಲ್ವೆ ಬ್ಯಾರಿಕೇಡ್ ಘೋಷಣೆಗೆ ಮಾತ್ರ ಸೀಮಿತನಾ? ನಿಮ್ಮ ಸಿದ್ಧ ಉತ್ತರ, ಸಬೂಬು ಬೇಡ, ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿದ್ದಾರೆ.
ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ: ಲಾಠಿಚಾರ್ಜ್ ಹಿನ್ನೆಲೆ ಶೃಂಗೇರಿ ಕ್ಷೇತ್ರ ಬಂದ್



