“ಉತ್ತರಕಾಂಡ” ಚಿತ್ರದಿಂದ ಮೋಹಕತಾರೆ ರಮ್ಯಾ ಹೊರ ನಡೆದ ನಂತರ, ಚಿತ್ರದ ನಾಯಕಿ ಯಾರಾಗ್ತಾರೆ ಅನ್ನುವ ಪ್ರಶ್ನೆ ಕನ್ನಡ ಕಲಾರಸಿಕರಲ್ಲಿ ಇದೆ. ಆದರೆ .. ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಕಾರಣಕ್ಕೆ.. ಕುತೂಹಲದದಿಂದ ಅನೇಕರು ಕೆ.ಆರ್.ಜಿ ಸಂಸ್ಥೆಯ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆ ಇಂದು, ಚೈತ್ರಾ ಆಚಾರ್ ಅವರ ಫೋಟೋ ಕೆ.ಆರ್.ಜಿ ಸಂಸ್ಥೆಯ ಸೊಶಿಯಲ್ ಮೀಡಿಯಾ ಟೈಮ್ ಲೈನ್ನಲ್ಲಿ ಕಾಣಿಸಿಕೊಂಡಿದೆ.
ಹೌದು, ಚೈತ್ರಾ ಆಚಾರ್.. ಉತ್ತರಕಾಂಡ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ. ಹಾಗಂಥ.. ರಮ್ಯಾ ಜಾಗಕ್ಕೆ ಚೈತ್ರಾ ಆಚಾರ ಬಂದಿಲ್ಲ. ಬದಲಿಗೆ ಚಿತ್ರದಲ್ಲಿನ ಬಹುಮುಖ್ಯವಾದ ಪಾತ್ರಕ್ಕೆ ಚೈತ್ರಾ ಬಣ್ಣ ಹಚ್ಚಿದ್ದಾರೆ. ಲಚ್ಚಿ ಎಂಬ ಪಾತ್ರಕ್ಕೆ ತಮ್ಮ ಅಭಿನಯದಿಂದ ಜೀವ ತುಂಬಲು ಸಿದ್ಧರಾಗಿದ್ದಾರೆ. ಚಿತ್ರೀಕರಣದಲ್ಲಿಯೂ ಕೂಡ ಇಂದು ಭಾಗಿಯಾಗಿದ್ದಾರೆ.
ಇನ್ನೂ ”ಉತ್ತರಕಾಂಡ” ಚಿತ್ರದ ಭಾಗವಾಗುತ್ತಿರುವುದಕ್ಕೆ ಸಹಜವಾಗಿಯೇ ಚೈತ್ರಾ ಖುಷಿಯಾಗಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ. ಇದಕ್ಕೆ ಕಾರಣ ಚಿತ್ರದ ಸ್ಟಾರ್ ಕಾಸ್ಟ್.. ಡೈರೆಕ್ಟರ್ ಮತ್ತು ದೊಡ್ಡ ನಿರ್ಮಾಣ ಸಂಸ್ಥೆ ಅನ್ನುವುದು ಒಂದು ಕಾರಣವಾದರೆ, ಚೈತ್ರಾ ಆಚಾರ್.. ಮೊದಲಿಂದ ತಮ್ಮನ್ನ ತಾವು ಸವಾಲಿನ ಪಾತ್ರಕ್ಕೆ ಒಡ್ಡಿಕೊಂಡಿರುವ ನಟಿ. ಮರ ಸುತ್ತುವ ಪಾತ್ರಕ್ಕೆ ಮಣೆ ಹಾಕಿದವರಲ್ಲ ಚೈತ್ರಾ.
”ಉತ್ತರಕಾಂಡ” ದಲ್ಲಿ ಕೂಡ ಚೈತ್ರಾಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಇದಕ್ಕೆ ಸಾಕ್ಷಿಯೇ ಇಂದು ಹೊರ ಬಿಡಲಾದ ಫಸ್ಟ್ ಲುಕ್. ಹೀಗಾಗಿಯೇ.. ಸಿಕ್ಕಾಪಟ್ಟೆ ಎಕ್ಸೈಟ್ ಆಗಿರುವ ಚೈತ್ರಾ ಆಚಾರ್ ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ ಎಂದು ಹೇಳಿಲ್ಲವಾದರೂ, ಆಟ ಶುರು ಮಾಡೋನಂತ್ ಏನಂತೀರಿ..? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.