ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 1 ಕೋಟಿ 30ಲಕ್ಷ ಜನರು ವಾಸವಿದ್ದಾರೆ. ಅಂದಾಜು 28ಲಕ್ಷಕ್ಕೂ ಹೆಚ್ಚು ಆಸ್ತಿಗಳು ನಗರ ಪ್ರದೇಶದಲ್ಲಿ ಇದೆ. ಸಮರ್ಪಕ ಕಾರ್ಯನಿರ್ವಹಿಸಲು ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ.
ಇತ್ತಿಚೇಗಿನ ದಿನಗಳಲ್ಲಿ ಕಂದಾಯ ಇಲಾಖೆಯ ಕಂದಾಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.
ಕಂದಾಯ ವಸೂಲಾತಿ, ಚುನಾವಣೆ ತಯಾರಿ, ಬೆಸ್ಕಾಂ ತೆರಿಗೆ ಮತ್ತು ಮನೆಗಳ ಸರ್ವೆ, ಇ.ಆಸ್ತಿ ಮತ್ತು ಸಕಾಲ, ಪೊಲೀಸ್ ಸೆನ್ಸಸ್, ಶಿಕ್ಷಕರ ಚುನಾವಣೆ ಹಾಗೂ ಮಾಹಿತಿ ಹಕ್ಕು ಈ ಎಲ್ಲ ಕೆಲಸ ನಿರ್ವಹಣೆ ಮಾಡಬೇಕು. ಪ್ರತಿ ದಿನ 25ಮನೆಗಳಿಗೆ ಭೇಟಿ ಮತ್ತು 25ಮನೆಗಳಿಗೆ ಸರ್ವೆ ಮಾಡಬೇಕು, ಚುನಾವಣೆ ಸಂಭಂದಿಸಿದ ವಿಷಯದಲ್ಲಿ ಗಮನಹರಿಸಬೇಕು ಕಂದಾಯ ವಸೂಲಾತಿಯಾಗಬೇಕು ಇಷ್ಟೆಲ್ಲ ಕಾರ್ಯ ಮಾಡಲು ಸಮಯ ಮತ್ತು ಸಿಬ್ಬಂದಿಗಳ ಕೊರತೆ ಇದೆ.
ಬಿಬಿಎಂಪಿ ಮೇಲಾಧಿಕಾರಿಗಳು ಇವೆಲ್ಲ ಸಮಸ್ಯೆಗಳ ಮಾಹಿತಿ ಇದ್ದರು ವಿನಾಕಾರಣ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಒತ್ತಡ ಹಾರುತ್ತಾರೆ. ಮನುಷ್ಯ ಪ್ರತಿನಿತ್ಯ ಇಷ್ಟು ಗಂಟೆ ಕೆಲಸ ಮಾಡಬಹುದು, ಅತಿಯಾದ ಕೆಲಸ ಮಾನಸಿಕ ಒತ್ತಡದಿಂದ ಕಂದಾಯ ಇಲಾಖೆ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹೋಗಿದ್ದಾರೆ.
ಸಮಯ ಕಡೆ ಗಮನಹರಿಸದೇ ಕೆಲಸ ಮಾಡುತ್ತಿರುವುದರಿಂದ ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ.ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇಕಡ 90 ನೌಕರರಿಗೆ ಸಕ್ಕರೆ ಖಾಯಿಲೆ, ಬಿ.ಪಿ ಮತ್ತು ಗಂಭೀರ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಭಾರ ಎಷ್ಟು ಹೊರಲು ಸಾಧ್ಯ ಅತಿಯಾದರೆ ಅಪತ್ತು ಏನ್ನುವಂತೆ ಆಗಿದೆ . ನೊಂದ ಕಂದಾಯಾಧಿಕಾರಿಗಳು, ಸಿಬ್ಬಂದಿಗಳು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.