ಬೆಂಗಳೂರು: ಭಾರತದ ಪ್ರಮುಖ ಏ-12 ಶಾಲಾ ವ್ಯವಸ್ಥೆಯ ಕೊಂಡಿಯಾಗಿರುವ ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್, ದೇಶಾದ್ಯಂತ ಉಪಸ್ಥಿತರಿರುವ ತನ್ನ ವಿದ್ಯಾರ್ಥಿಗಳ ಜಾಣ್ಮೆ, ನಾವೀನ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುವ ಸಲುವಾಗಿ, ರಾಷ್ಟ್ರವ್ಯಾಪಿ ಬೃಹತ್ ಟೆಕ್ ಉತ್ಸವ, ಮೆಕಥ್ಲಾನ್ (MECHATHLON) 2023 ಅನ್ನು ಇಂದು ಆಯೋಜಿಸಿತ್ತು.
ನಾವೀನ್ಯದ ಸ್ಫೂರ್ತಿಯೊಂದಿಗೆ ಒಗ್ಗೂಡು ವಂತಹ ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುವ ಜೊತೆಗೆ, ಈ ಉತ್ಸವವು ಪ್ರತಿಭೆಗಳ ನಿಜವಾದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು ಮತ್ತು ವಿದ್ಯಾರ್ಥಿಗಳು ತಮ್ಮ ಜ್ಞಾನದ ಎಲ್ಲೆಗಳನ್ನು ಮೀರಿ ಹುಮ್ಮಸ್ಸಿನಿಂದ ಪಾಲ್ಗೊಂಡರು. ಈ ಉತ್ಸವವನ್ನು ಬೆಂಗಳೂರಿನ ಎಲ್ಲ ಆರ್ಕಿಡ್ಸ್ ಶಾಲೆಗಳಲ್ಲಿ ಆಯೋಜಿಸಲಾಗಿತ್ತು.
ಟೆಕ್ ಉತ್ಸವವು, ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ವರ್ಧಿಸಲು, ಕುತೂಹಲ ಮತ್ತು ಸ್ವಂತಿಕೆಯನ್ನು ಪ್ರೋತ್ಸಾಹಿಸಲು ಮತ್ತು ಪ್ರಾಯೋಗಿಕ ಸನ್ನಿವೇಶಗಳಲ್ಲಿ ಗಣಿತದ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳನ್ನು ಅನ್ವಯಿಸಲು ಅನುವು ಮಾಡಿಕೊಟ್ಟು, ಬಹುಮುಖಿ ಕಲಿಕೆಯ ಅನುಭವವನ್ನು ನೀಡಿತು.
ವಿದ್ಯಾರ್ಥಿಗಳು ಪ್ರಕರಣ ಅಧ್ಯಯನದ ಸ್ಪರ್ಧೆ ಮತ್ತು ಜಿಜ್ಞಾಸೆದಾಯಕ ರಸಪ್ರಶ್ನೆಯ ಸ್ಪರ್ಧೆಯ ಜೊತೆಗೆ ಜೂನಿಯರ್ ಐನ್ಸ್ಟೈನ್ ಮತ್ತು ಆರ್ಯಭಟ ಮಾದರಿ ತಯಾರಿಕೆ ಎಂಬ ವಿಷಯಾಧಾರಿತ ಸ್ಪರ್ಧೆಗಳ ಸರಣಿಯಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು ವಾಸ್ತವಿಕ-ಜಗತ್ತಿನ ಸವಾಲುಗಳಿಗೆ ತಮ್ಮ ಜ್ಞಾನವನ್ನು ಅನ್ವಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿ, ತಮ್ಮ ಕೆಲಸದ ಮಾದರಿಗಳನ್ನು ಅನಾವರಣಗೊಳಿಸಿದಾಗ ಟೆಕ್ ಉತ್ಸವವು ಉತ್ಸಾಹದಿಂದ ಝೇಂಕರಿಸಿತು.
ಕುತೂಹಲಕಾರಿ ಯುವ ಮನಸ್ಸುಗಳು ಭಾಗವಹಿಸಿರುವ ಕುರಿತು ಪ್ರತಿಕ್ರಿಯಿಸಿದ ಆರ್ಕಿಡ್ಸ್ ದಿ ಇಂಟರ್ನ್ಯಾಶನಲ್ ಸ್ಕೂಲ್ನ ಗಿP ಅಕಾಡೆಮಿಕ್, ಶ್ರೀ ಶ್ಲೋಕ್ ಶ್ರೀವಾಸ್ತವ ಅವರು, “ನಮ್ಮ OCFP ಪಠ್ಯಕ್ರಮವು STEM ಗೆ ಅಗತ್ಯವಿರುವ ಆರಂಭಿಕ ಬುನಾದಿಯನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುವುದರ ಜೊತೆಗೆ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಅವರಲ್ಲಿರುವ ಜ್ಞಾನದ ತಳಹದಿಯನ್ನು ವರ್ಧಿಸುತ್ತದೆ.
MECHATHLON 2023 ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಜ್ಞಾನದ ನಿರಂತರ ಅನ್ವೇಷಣೆಯ ಸಂಭ್ರಮವಾಗಿದೆ. ಈ ಉತ್ಸವವು ಸಮಗ್ರ ಶಿಕ್ಷಣಕ್ಕಾಗಿ ಮುಡಿಪಾಗಿಟ್ಟ ನಮ್ಮ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಪ್ರಮುಖ ಉದ್ದೇಶವೆಂದರೆ STEM ನಲ್ಲಿ ವಿದ್ಯಾರ್ಥಿಗಳ ವೈಜ್ಞಾನಿಕ ಮನೋಧರ್ಮವನ್ನು ಅಭಿವೃದ್ಧಿಪಡಿಸುವುದು, ವಿಮರ್ಶಾತ್ಮಕ ಮೌಲ್ಯಮಾಪನ, ಅವಲೋಕನ, ಕೌಶಲ್ಯಗಳು ಮತ್ತು ಜ್ಞಾನವನ್ನು ಬೆಳೆಸುವುದು ಹಾಗೂ ಅಭಿವೃದ್ಧಿಪಡಿಸುವುದು. ಆರ್ಕಿಡ್ಸ್ನಲ್ಲಿ, ವಿದ್ಯಾರ್ಥಿಗಳಿಗೆ ಅನ್ವೇಷಿಸಬಹುದಾದ, ಆವಿಷ್ಕರಿಸಬಹುದಾದ ಮತ್ತು ವಿಕಸಿಸಬಹುದಾದ ರೀತಿಯ ನವೀನ ಕಲಿಕೆಯ ಸ್ಥಳವನ್ನು ರಚಿಸುವ ಮೂಲಕ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ಮೆಕ್ಲಥಾನ್ 2023, ಬೃಹತ್ ಗಾತ್ರದ ಅತ್ಯುತ್ತಮ ಕಾರ್ಯಕ್ರಮವಾಗುವುದರ ಜೊತೆಗೆ ತಂತ್ರಜ್ಞಾನದ ಪ್ರತಿಯಾಗಿ ಹೆಚ್ಚು ಅಭಿರುಚಿಯನ್ನು ಹೊಂದಿತ್ತು ಮತ್ತು ಸವಾಲುಗಳನ್ನು ಸ್ವೀಕರಿಸಿದ ಎಲ್ಲ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳಗಿಸಿತು. ಉತ್ಸವವು ಕಲಿಕೆಯನ್ನು ಆಕರ್ಷಕ ಮತ್ತು ಆನಂದದಾಯಕವನ್ನಾಗಿಸಿತು ಮತ್ತು ವಿದ್ಯಾರ್ಥಿಗಳನ್ನು ಅವರ ಭವಿಷ್ಯದ ಪ್ರಯತ್ನಗಳಿಗೆ ನಿರ್ಣಾಯಕವಾಗುವ ಪ್ರಾಯೋಗಿಕ ತಾಂತ್ರಿಕ ಕೌಶಲಗಳೊಂದಿಗೆ ಸಜ್ಜುಗೊಳಿಸಿತು. ಯುವ ಪ್ರತಿಭೆಗಳ ಅಸಾಧಾರಣ ಸಾಮರ್ಥ್ಯಗಳನ್ನು ಪ್ರದರ್ಶಿಸಲು, ಸ್ಫೂರ್ತಿ ಮತ್ತು ಸವಾಲುಗಳನ್ನು ಒದಗಿಸಲು ಹಾಗೂ ಅವರ ಅದ್ಭುತ ಕೌಶಲಗಳಿಗೆ ಮನ್ನಣೆಯನ್ನು ನೀಡುವಲ್ಲಿ ಈ ಉತ್ಸವವು ಅಪೂರ್ವವಾದ ವೇದಿಕೆಯಾಯಿತು.