ಆನೇಕಲ್ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಎಸ್.ಜೆ.ಆರ್. ಕಾನೂನು ಕಾಲೇಜು ಸಹಯೋಗದೊಂದಿಗೆ ಬೆಂಗಳೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ 2023-24 ಯಶಸ್ವಿಯಾಗಿ ನಡೆಯಿತು.
ಸ್ಪರ್ಧೇಯಲ್ಲಿ ವಿಜೇತರಾದ ವಿದ್ಯಾರ್ಥಿ ಅನಿಲ್ ಎಸ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ರಾಜಕೀಯಕ್ಕೆ ಬರಬೇಕು ಎಂಬಾ ದುರದೃಷ್ಠಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಇಂತಹ ಮಾದರಿ ವಿಧಾನ ಸಭಾ ಆಧಿವೇಶನ ಸ್ಪರ್ಧೇ ಗಳು ಸಹಕಾರಿಯಾಗಲಿದ್ದು ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಜನ ಸಾಮನ್ಯರಿಗೆ ಸರ್ಕಾರಗಳಿಂದ ಸಿಗುವ ವಿವಿಧ ಸವಲತ್ತುಗಳನ್ನು ದೊರಕುವಂತೆ ಮುನ್ನೆಡೆಯುತ್ತೇವೆ ಎಂದರು.
ಇದೇ ವೇಳೆ ಸ್ಪರ್ಧೆಯಲ್ಲಿ ವಿಜೇತರಾದ ಅತ್ಯುತ್ತಮ ಹತ್ತು ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಕಾನೂನು, ನ್ಯಾಯ, ಮಾನವ ಹಕ್ಕುಗಳ ಇಲಾಖೆಯ ವಿಶೇಷ ಕಾರ್ಯದರ್ಶಿಗಳಾದ ಹೆಚ್.ಕೆ. ಜಗದೀಶ್, ಕಿಲ್ಪಾರ್ ಸಂಸ್ಥೆಯ ನಿರ್ದೇಶಕರಾದ ಕೆ.ದ್ವಾರಕನಾಥ್ ಬಾಬು, ಸಂಶೋಧನಾ ನಿರ್ದೇಶಕರಾದ ಸಿ.ಎಸ್. ಪಾಟೀಲ್, ಸಂಶೋಧನಾ ಮುಖ್ಯಸ್ಥರಾದ (ಸಂಸದೀಯ) ಡಾ. ರೇವಯ್ಯ ಒಡೆಯರ್, ಎಸ್.ಜೆ.ಆರ್. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ಆರ್. ಸಾಲಿಮಠ್, ಕಾರ್ಯಕ್ರಮ ಸಂಯೋಜಕರಾದ ಜ್ಯೋತಿ ಎಂ.ಎನ್. ಹಾಗೂ ಮತ್ತಿತ್ತರರು ಹಾಜರಿದ್ದರು.