ಸಿಲೆಟ್, ಬಾಂಗ್ಲಾದೇಶ: ಮತ್ತೆ ಪ್ರಾಬಲ್ಯ ಮೆರೆದ ಭಾರತದ ವನಿತೆಯರು ಸೋಮವಾರ ನಾಲ್ಕನೇ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಡಕ್ವರ್ಥ್ ಲೂಯಿಸ್ ನಿಯಮದಡಿ 56 ರನ್ಗಳಿಂದ ಮಣಿಸಿದರು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದರು.
ಮಳೆಯಿಂದಾಗಿ ಪಂದ್ಯವನ್ನು 14 ಓವರ್ಗಳಿಗೆ ಸೀಮಿತ ಮಾಡಲಾಯಿತು.ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಾಯಕಿ ಹರ್ಮನ್ಪ್ರೀತ್ ಕೌರ್ (38) ಅವರ ಬ್ಯಾಟಿಂಗ್ ಬಲದಿಂದ ನಿಗದಿತ ಓವರ್ಗಳಲ್ಲಿ 6 ವಿಕೆಟ್ಗೆ 122 ರನ್ ಗಳಿಸಿತು.ಡಕ್ವರ್ಥ್ ಲೂಯಿಸ್ ನಿಮಯದಂತೆ ಗೆಲುವಿಗೆ ಬಾಂಗ್ಲಾದೇಶವು 14 ಓವರ್ಗಳಲ್ಲಿ 125 ರನ್ ಗಳಿಸಬೇಕಿತ್ತು.
ಭಾರತದ ಬೌಲರ್ಗಳ ದಾಳಿಗೆ ಕುಸಿದ ಆತಿಥೇಯ ತಂಡವು 7 ವಿಕೆಟ್ಗಳಿಗೆ 68 ರನ್ ಗಳಿಸಲಷ್ಟೇ ಶಕ್ತವಾಯಿತು. ದೀಪ್ತಿ ಶರ್ಮಾ ಮತ್ತು ಆಶಾ ಶೋಭಾನಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸರಣಿಯ ಕೊನೆಯ ಪಂದ್ಯ ಇದೇ 9ರಂದು ಸಿಲೆಟ್ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ 14 ಓವರ್ಗಳಲ್ಲಿ 6 ವಿಕೆಟ್ಗೆ 122 (ಸ್ಮೃತಿ ಮಂಧಾನ 22, ದಯಾಳನ್ ಹೇಮಲತಾ 22, ಹರ್ಮನ್ಪ್ರೀತ್ ಕೌರ್ 39, ರಿಚಾ ಘೋಷ್ 24; ಮಾರುಫಾ ಅಕ್ತರ್ 24ಕ್ಕೆ 2). ಬಾಂಗ್ಲಾದೇಶ 14 ಓವರ್ಗಳಲ್ಲಿ 7 ವಿಕೆಟ್ಗೆ 68 (ದಿಲಾರಾ ಅಕ್ತರ್; ದೀಪ್ತಿ ಶರ್ಮಾ 13ಕ್ಕೆ 2, ಆಶಾ ಶೋಭಾನಾ 18ಕ್ಕೆ 2, ಪೂಜಾ ವಸ್ತ್ರಕಾರ್ 15ಕ್ಕೆ 1, ರಾಧಾ ಯಾಧವ್ 12ಕ್ಕೆ 1). ಪಂದ್ಯದ ಅಟಗಾರ್ತಿ: ಹರ್ಮನ್ಪ್ರೀತ್ ಕೌರ್. ಫಲಿತಾಂಶ: ಭಾರತಕ್ಕೆ 56 ರನ್ಗಳ ಜಯ (ಡಿಎಲ್ಎಸ್ ನಿಯಮದಂತೆ)