ಬೆಂಗಳೂರು :ರಾಜ್ಯದಲ್ಲಿ ಆರ್ಎಸ್ಎಸ್ ಚಟುವಟಿಕೆಗೆ ನಿಷೇಧ ಹೇರುವಂತೆ ಪ್ರಿಯಾಂಕಖರ್ಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಫಿಕ್ಸ್ಎಂದು ಹೇಳಲಾಗುತ್ತಿದೆ. ಹೌದು ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಇರುವ ಕುರಿತು ಸಿಎಂ ಸಿದ್ದರಾಮಯ್ಯ ಪರೋಕ್ಷ ಸುಳಿವು ಕೊಟ್ಟಿದ್ದಾರೆ. ತಮಿಳುನಾಡು ಮಾದರಿಯಲಿಗೆ ಆರ್ಎಸ್ಎಸ್ ಗೆ ನಿಷೇಧ ಹೇರುವ ಸಾಧ್ಯತೆ ಇದೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರವಾಗಿಚರ್ಚೆ ನಡೆಯುವ ಸಾಧ್ಯತೆ ಇದೆ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆಗಳು ಇವೆ ಪ್ರಿಯಾಂಕಖರ್ಗೆ ಬೆಂಬಲಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ನಿಂತಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅನೌಪಚಾರಿಕ ಚರ್ಚೆ ಸಾಧ್ಯತೆ ಇದೆ ಆರ್ಎಸ್ಎಸ್ ಗೆ ನೇರವಾಗಿ ಅಲ್ಲದಿದ್ದರೂ ನಿರ್ಬಂಧದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಇದೆ.ಆರ್ಎಸ್ಎಸ್ ಹೆಸರು ಉಲ್ಲೇಖ ಮಾಡದೆ ಅಂಕುಶ ಹಾಕುವ ಸಾಧ್ಯತೆಗಳು ಇವೆ. ಕಾನೂನಾತ್ಮಕ ಅಂಶಗಳ ಬಗ್ಗೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಚರ್ಚೆ ಮಾಡಿದ್ದಾರೆ ಸಚಿವ ಪ್ರಿಯಾಂಕ ಖರ್ಗೆ ಜೊತೆಗೂ ಸಿ ಎಸ್ಚರ್ಚೆ ಮಾಡಿದ್ದಾರೆಎಂದು ತಿಳಿದು ಬಂದಿದೆ.