ತಿ.ನರಸೀಪುರ: ತಿ. ನರಸೀಪುರ ಮತ್ತು ಬನ್ನೂರು ಪುರಸಭಾ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ಸದಸ್ಯರ ಅಧಿಕಾರದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ದೈನಂದಿನ ಕಛೇರಿಯ ಕಾರ್ಯ ಚಟುವಟಿಕೆಗಳಿಗೆ ಮೈಸೂರು ಉಪವಿಭಾಗಾಧಿಕಾರಿಗಳನ್ನು ಬನ್ನೂರು ಮತ್ತು ನರಸೀಪುರ ಪುರಸಭೆಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿರುವ ಆದೇಶ ಹೊರಬಿದ್ದಿದೆ.
ಪ್ರಸ್ತುತ ಸ್ಥಳೀಯಸಂಸ್ಥೆಗಳಾದ ರಾಜ್ಯದಲ್ಲಿನನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಚುನಾಯಿತ ಕೌನ್ಸಿಲ್ ಅವಧಿಯು ಸಂವಿಧಾನಿಕವಾಗಿ ಚುನಾಯಿತ ಪ್ರತಿನಿಧಿಗಳ ಅಧಿಕಾರದ ಅವಧಿಯ ಕಾಲ ೫ ವರ್ಷ ನಿಗದಿಯಾಗಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವ ಅವಧಿ ವಿಳಂಬವಾದ ಹಿನ್ನೆಲೆ ಪುರಸಭಾ ಸದಸ್ಯರಿಗೆ ಹೆಚ್ಚುವರಿಯಾಗಿ
ಎರಡುವರೆ ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸುವಂತಾಯಿತು.
ಕೊನೆಗೂ ಸದಸ್ಯರ ಅಧಿಕಾರದ ಅವಧಿ ಮುಕ್ತಾಯಗೊಂಡಿರುವುದರಿಂದ ಕರ್ನಾಟಕ ಪೌರಾಡಳಿತ ಕಾಯ್ದೆ ೧೯೫೪ರ ಕಲಂ -೩೮೯ ರಲ್ಲಿ ಪ್ರದತ್ರವಾದ ಅಧಿಕಾರವನ್ನು ಚಲಾಯಿಸಿ ಅವಧಿ ಮುಕ್ತಾಯಗೊಂಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಅವುಗಳ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಟಿ ನರಸೀಪುರ ಮತ್ತು ಬನ್ನೂರು ಪುರಸಭೆಗೆ ಮೈಸೂರು ಉಪವಿಭಾಗಾಧಿಕಾರಿ ರವರನ್ನು ಎರಡು ಪುರಸಭೆಗೆ ಆಡಳಿತ ಆಡಳಿತ ಅಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶಹೊರಡಿಸಿದೆ. ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ ಎಂದು ಚುನಾವಣೆ ನಡೆಸದೆ ಚುನಾವಣೆಯನ್ನು ವಿಳಂಬ ನೀತಿ ಅನುಸರಿಸದೆ ಸರ್ಕಾರ ಮತ್ತು ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯಬೇಕೆಂದರೆ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿರಬೇಕು ಎಂಬ ಕೂಗು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತದೆ.



