ಬೆಂಗಳೂರು: ದುಷ್ಕರ್ಮಿಗಳು ರಾಡ್ ನಿಂದ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ರಸ್ತೆ ಬದಿ ಶವ ಬಿಸಾಕಿರುವ ಘಟನೆ ಬೆಂಗಳೂರಿನ ಕೆಂಗೇರಿ ಮಾದೇಶ್ವರ ಬಡಾವಣೆಯಲ್ಲಿ ನಡೆದಿದೆ.
ರಾಡ್ ನಿಂದ ಹಲ್ಲೆಗೆ ಒಳಗಾದ ಕೆಂಪಮ್ಮ (45) ಕೊಲೆಯಾದ ಮಹಿಳೆ. ಕೊಲೆ ಮಾಡಿ ದುಷ್ಕರ್ಮಿಗಳು ಶವವನ್ನು ರಸ್ತೆ ಬದಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಶವ ನೋಡಿದ ತಕ್ಷಣ ಸ್ಥಳೀಯರು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



