ಚಿಕ್ಕಬಳ್ಳಾಪುರ: ಕದಿರಿಹುಣ್ಣಿಮೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿಯ ಪುರಾಣ ಪ್ರಸಿದ್ಧ ಐತಿಹಾಸಿಕ ಶ್ರೀ ಜಾಲಾರಿ(ಜ್ವಾಲಾ) ಯೋಗ ಮತ್ತು ಜ್ವಾಲಾ ಭೋಗನರಸಿಂಹ ಸ್ವಾಮಿಯವರ ಶ್ರೀಮದ್ ಕಲ್ಯಾಣ ಬ್ರಹ್ಮರಥೋತ್ಸವ ಅಂಗವಾಗಿ ಶ್ರೀ ಭೋಗ ಲಕ್ಷ್ಮಿ ನರಸಿಂಹ ಸ್ವಾಮಿ ಅವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಇಲ್ಲಿ ನಡೆಯುವ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರು ದೇವಾಲಯಕ್ಕೆ ಸರತಿ ಸಾಲಿನಲ್ಲಿ ಬರುವಂತಗಲೂ ಅತ್ಯಂತ ವ್ಯವಸ್ಥೆಯಾಗಿ ಸಿದ್ದತೆ ಮಾಡಿದ್ದರು.ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ಸಹ ಮುಂಜಾನೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ದ್ರವ್ಯಾರ್ಚನೆ, ಪಂಚಾಮೃತ ಅಭಿಷೇಕ ಕಳಶಾರಾಧನೆ ಹೋಮ ನಡೆಯಿತು ಅಲ್ಲದೆ ಧೂಳೋತ್ಸವ, ಸಿಂಹವಾಹನೋತ್ಸವ, ಗರುಡತ್ಸವ ಅಶ್ವವಾಹನೋತ್ಸವ ಕರ್ನಾಟಕ ಸರ್ಕಾರದ ನೆರವಿನಿಂದ ನಡೆಯುವ ಬ್ರಹ್ಮ ರಥೋತ್ಸವದ ನಂತರ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಬಿಸಿಲಿನ ಬೇಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು ಅದರಂತೆ ದೇವಾಲಯದ ಪ್ರಧಾನ ಅರ್ಚಕರದ ಜಿಎನ್ ನರಸಿಂಹಾಚಾರ್ ಅವರು ಶ್ರೀ ಜಾಲಾರಿ (ಜ್ವಾಲಾ)ಯೋಗ ಮತ್ತು ಜ್ವಾಲಾಭೋಗ ಲಕ್ಷ್ಮಿ ನರಸಿಂಹಸ್ವಾಮಿ ದೇವರಿಗೆ ಬಗೆ ಬಗೆಯ ಹೂಗಳಿಂದ ಶೃಂಗರಸಿ ವಿಶೇಷ ಪೂಜೆ ಪುನಸ್ಕಾರ ಮಾಡಿ ಭಕ್ತರಿಗೆ ಶ್ರೀ ಸ್ವಾಮಿಯವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.
ಶ್ರೀ ಸ್ವಾಮಿಯವರ ಬ್ರಹ್ಮ ರಥೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಂದ ಡಾ. ಬಿ ವಿ ಕೃಷ್ಣ ಯರ್ರಪ್ಪ ಮತ್ತು ವೃಂದದವರಿಂದ ಸಾಂಸ್ಕೃತಿಕ ನೃತ್ಯಗಳು ಮತ್ತು ಭಕ್ತಿ ಗೀತೆಗಳು ಮಾಡಲಾಗಿತ್ತು.ಚಿಕ್ಕಬಳ್ಳಾಪುರ ತಾಲೂಕಿನ ಅರಿಕೆರೆ ಹನುಮಂತಪುರ ಕುರ್ಲಹಳ್ಳಿ, ಆವಲಗುರ್ಕಿ ದಿನ್ನೆಹೊಸಳ್ಳಿ ಗುಂತಪ್ಪನಹಳ್ಳಿ, ಗೇರಹಳ್ಳಿ ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯ ಸದ್ಭಕ್ತರು ಜನವಿಡಿ ದೇವರ ದರ್ಶನ ಪಡೆಯಲು ಹರಿದು ಬರುತಿದ್ದರು.