ಪೀಣ್ಯ ದಾಸರಹಳ್ಳಿ: ನಗರದ ನಯನ ಸಭಾಂಗಣದಲ್ಲಿ ಗೆಜ್ಜೆ ಹೆಜ್ಜೆ ರಂಗತಂಡ ಸಂಸ್ಥೆಯ ವತಿಯಿಂದ ವಿಶ್ವಮಾನವ ಬಸವಣ್ಣನವರ ಉತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವ ಸಾಧಕರುಗಳಿಗೆ ಬಸವ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಚಿತ್ರನಟರಾದ ಮೈಸೂರು ರಮಾನಂದ್, ಸಮಾಜ ಸೇವಕರಾದ ಡಾ.ಸುಭಾಷಿಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಾಡಿನ ಸಾಧಕರುಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ವಿಶ್ವಮಾನವ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ನಾ.ಚಿ. ಪ್ರಸನ್ನ ರವರಿಗೆ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಪುರಸ್ಕರಿಸಲಾಯಿತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಡಾ.ನಾ.ಚಿ ಪ್ರಸನ್ನ ರವರು ಪ್ರಶಸ್ತಿ ಸ್ವೀಕರಿಸಿದ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಂತಾಗಿದೆ ಇನ್ನು ಹೆಚ್ಚು ಸಮಾಜಸೇವೆಯನ್ನು ಮಾಡುವುದಕ್ಕೆ ಪೆÇ್ರೀತ್ಸಾಹ ನೀಡಿರುವ ಗೆಜ್ಜೆ ಹೆಜ್ಜೆ ರಂಗತಂಡಕ್ಕೆ ಧನ್ಯವಾದಗಳು ತಿಳಿಸಿದರು.