ಬೆಂಗಳೂರು ನಗರದ ಪ್ರೆಸ್ ಕ್ಲಬ್ ಸಮೀಪ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಸವನಗುಡಿ ತ್ಯಾಗರಾಜುರವರು ಕರ್ನಾಟಕ ವಿಧಾನಸಭಾ 2023ರ ಸಾರ್ವಂತ್ರಿಕ ಚುನಾವಣೆಯಲ್ಲಿ ಎಂಟು ಜನ ಬಲಿಜ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ, ಅವರುಗಳ ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಬಲಿಜ ಪ್ರಗತಿಪರ ಚಿಂತಕ ಬಸವನಗುಡಿ ತ್ಯಾಗರಾಜುರವರು ಮನವಿ ಮಾಡಿಕೊಂಡರು.
ಬಲಿಜ ಸಮಾಜಕ್ಕೆ ರಾಜಕೀಯ ಶಕ್ತಿ ಬಹು ಮುಖ್ಯವೆಂದರು. ಆದ್ದರಿಂದ ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ವಿ.ದೇವರಾಜ್,ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುನಿರಾಜು,ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್‍ಈಶ್ವರ್, ಹಾನಗಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮನೋಹರ ತಹಸಿಲ್ದಾರ್, ತುಮಕೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು, ಹೊಸಪೇಟೆ, ವಿಜಯನಗರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ವಿಜಯಕುಮಾರ್, ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಕೆಆರ್‍ಎಸ್ ಪಕ್ಷದ ಅಭ್ಯರ್ಥಿಯಾಗಿ ಶ್ರೀನಿವಾಸು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಗಿರೀಶ್‍ಕುಮಾರ್‍ನಾಯ್ಡು ಸ್ಪರ್ಧಿಗಳಾಗಿದ್ದಾರೆ.
ಮೇಲ್ಕಂಡ ನಮ್ಮ ಹೆಮ್ಮೆಯ ಬಲಿಜ ಅಭ್ಯರ್ಥಿಗಳು ಈ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಯಾ ಕ್ಷೇತ್ರದ ಬಲಿಜ ಮುಖಂಡರುಗಳು ಆಯಾ ಕ್ಷೇತ್ರದ ಮತದಾರರನ್ನು ಸಂಪರ್ಕಿಸಿ ಹೆಚ್ಚಿನ ಮತ ಪಡೆಯಲು ಬಲಿಜ ಮುಖಂಡರುಗಳು ಶ್ರಮಿಸಬೇಕೆಂದರು. ಪತ್ರಿಕಾ ಗೋಷ್ಠಿಯಲ್ಲಿ ಮಲ್ಲೇಶ್ವರಂ ಅಶೋಕ್‍ಕುಮಾರ್ ಸೇರಿದಂತೆ ಅನೇಕ ಬಲಿಜ ಮುಖಂಡರಿದ್ದರು.
ವರದಿ: ಜಿ.ಎಲ್.ಸಂಪಂಗಿರಾಮುಲು
Leave a Review