ತಿ.ನರಸೀಪುರ: ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಗೊಳಿಸುತ್ತಿರುವ ಹಿನ್ನೆಲೆ ತಾಲ್ಲೂಕಿಗೆ ಆಗಮಿಸಿದ್ದ ಮಂತ್ರಾಕ್ಷತೆ ಜಾಥಾಕ್ಕೆ ಆರ್.ಆರ್. ಎಸ್.ಹಿರಿಯ ಮುಖಂಡ ತೋಟದಪ್ಪ ಬಸವರಾಜು ಚಾಲನೆ ನೀಡಿದರು.ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಅವರು ರಾಮಮಂದಿರವನ್ನು ಉದ್ಘಾಟಿಸಲಿದ್ದು,ಇದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ.
ಇದರ ಪ್ರತೀಕವಾಗಿ ಮಂತ್ರಾಕ್ಷತೆಯನ್ನು ದೇಶದ ಮೂಲ ಮೂಲೆಗೂ ಹಂಚಿಕೆ ಮಾಡಲಾಗಿದೆ.ಮಂತ್ರಾಕ್ಷತೆಯನ್ನು ದೇವಾಲಯ ಇಡಲಾಗಿದೆ. ಮಂತ್ರಾಕ್ಷತೆಯನ್ನು ವೃದ್ಧಿಗೊಳಿಸಿ ಪಟ್ಟಣದ 23 ವಾರ್ಡ್ ಗಳ ಪ್ರತಿಯೊಂದು ಮನೆಗೂ ಮಂತ್ರಾಕ್ಷತೆ ಮತ್ತು ರಾಮನ ಭಾವಚಿತ್ರವನ್ನು ನಮ್ಮ ಕಾರ್ಯಕರ್ತರು ವಿತರಿಸುವರು.
ಅಂದು ಭಾರತದ 140ಕೋಟಿ ಜನರು ರಾಮನನ್ನು ಪೂಜಿಸುವರು ಎಂದರು.ಅಯೋಧ್ಯೆ ಉದ್ಘಾಟನೆಯ ದಿನದಂದು ಗುಂಜಾ ನರಸಿಂಹ ಸ್ವಾಮಿ ದೇವಾಲಯದಲ್ಲಿ ರಾಮಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನದಂದು ದೇಶದ ಎಲ್ಲ ಪ್ರಜೆಗಳು ಸ್ಥಳಕ್ಕೆ ಆಗಮಿಸಲು ಸಾಧ್ಯವಾಗದ ಕಾರಣ ಫೆಬ್ರವರಿ ಮಾಸದಲ್ಲಿ ರಾಮಮಂದಿರಕ್ಕೆ ತೆರಳಲು ಉಚಿತ ರೈಲ್ವೆ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದರು.
ಮಂತ್ರಾಕ್ಷತೆ ಜಾಥಾವು ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಹೊರಟು ಪಟ್ಟಣದ ತೇರಿನಬೀದಿ ಮಾರ್ಗವಾಗಿ ಭಗವಾನ್ ವೃತ್ತ, ಕೆ. ಎಸ್. ಆರ್.ಟಿ. ಸಿ ಬಸ್ ನಿಲ್ದಾಣದ ಕಡೆಗಳಲ್ಲಿ ಸಂಚರಿಸಿ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ವಾಪಸ್ಸಾಯಿತು.
ಸಂದರ್ಭದಲ್ಲಿ ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಮುಖಾಂಡರಾದ ಮೋಹನ್,ಶೇಖರ್,ಮುದ್ದುಕೃಷ್ಣ, ಶ್ರೀನಿವಾಸ್,ಸಿದ್ದಲಿಂಗಸ್ವಾಮಿ, ಅಯ್ಯಪ್ಪ ಸಿದ್ದಲಿಂಗಮೂರ್ತಿ ಇತರರು ಹಾಜರಿದ್ದರು.