ಬೆಂಗಳೂರು: ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಪಕ್ಷದ ಹೈಕಮಾಂಡಾ? ಎಂದು ಶಾಸಕ ಬಸವರಾಜ ಶಿವಗಂಗಾ ಪ್ರಶ್ನಿಸಿದ್ದಾರೆ.
ನಿನ್ನೆ ಪಕ್ಷದ ಶಾಸಕ ಕೆ.ಎನ್.ರಾಜಣ್ಣ ಅವರು ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ನೀಡಿದ್ದ ಹೇಳಿಕೆಗೆ ಸಮರ್ಥನೆಯನ್ನು ನೀಡಿ ಮಾತನಾಡಿದ್ದ ಬಸವರಾಜ ರಾಯರೆಡ್ಡಿ ವಿರುದ್ಧ ಬಸವರಾಜ ಶಿವಗಂಗಾ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಹೈಕಮಾಂಡ್ ರಾಜ್ಯದ ಕಾಂಗ್ರೆಸ್ ಶಾಸರ್ಯಾರು, ಯಾವುದೇ ಪರ-ವಿರುದ್ಧದ ಹೇಳಿಕೆಗಳನ್ನು ನೀಡದಂತೆ ತಿಳಿಸಿದ್ದರೂ ಪದೇ-ಪದೇ ಹೇಳಿಕೆ ನೀಡಿರುವ ರಾಜಣ್ಣ ಮತ್ತು ರಾಯರೆಡ್ಡಿ ಅವರ ಮಾತಿನ ಬಗ್ಗೆ ತಿರುಗೇಟು ನೀಡಿ ರಾಜಣ್ಣ ಅವರು ತಾವು ಮಾತನಾಡಿದ ಮಾತಿನ ಬಗ್ಗೆ ಬದ್ಧರಾಗಿರಲಿ ಎಂದಿದ್ದಾರೆ.
ಕಾAಗ್ರೆಸ್ ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ನಮಗೆ ಬೇಕಾದಾಗ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ.
ಬಸವರಾಜ ರಾಯರೆಡ್ಡಿ ಪಕ್ಷದ ಹೈಕಮಾಂಡಾ!? ಶಾಸಕ ಬಸವರಾಜ ಶಿವಗಂಗಾ ಪ್ರಶ್ನೆ?



