ಗುಂಡ್ಲುಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಮೊಳ್ಳಯ್ಯನಹುಂಡಿ ಬಸವರಾಜು, ಉಪಾಧ್ಯಕ್ಷರಾಗಿ ಪಸಯ್ಯನಪುರ ರಾಜು ಆಯ್ಕೆಯಾದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರಿಂದ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದವು. ನಂತರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ನ ಮೊಳ್ಳಯ್ಯನಹುಂಡಿ ಬಸವರಾಜು, ಪಸಯ್ಯನಪುರ ರಾಜು ತಲಾ 10 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲ್ಲಿ ಬಿಜೆಪಿ ಕಾಂಗ್ರೆಸ್ ನಿಂದ 12 ಸ್ಥಾನಗಳಲ್ಲಿ ತಲಾ 6 ಮಂದಿ ನಿರ್ದೇಶಕರು ಅಯ್ಕೆಯಾಗಿದ್ದರು ಟಿಎಪಿಸಿಎಂಎಸ್ ಸೇರಿ ಕಾಂಗ್ರೆಸ್ ಮೊದಲು 7 ಸ್ಥಾನಗಳಿದ್ದರು ಬಿಜೆಪಿ ಅಧಿಕಾರವಿದ್ದ ಕಾರಣ ಮೂರು ನಾಮನಿರ್ದೇಶಿತರ ಬಲದಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಅದರೆ ಈಗ ಕಾಂಗ್ರೆಸ್ ಅಧಿಕಾರವಿದ್ದು ಎಪಿಎಂಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಈ ಸಂದರ್ಭದಲ್ಲಿ ಶಾಸಕ ಗಣೇಶ್ ಪ್ರಸಾದ್, ಮಾಜಿ ಕಾಡಾ ಅಧ್ಯಕ್ಷ ಹೆಚ್ ಎಸ್ ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ನಂಜುಂಡಪ್ರಸಾದ್, ಜಿಲ್ಕಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ,ಎಸ್ ಮಹೇಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಮುನಿರಾಜು, ರಾಜಶೇಖರ್, ತಾ.ಪಂ ಮಾಜಿ ಅಧ್ಯಕ್ಷ ಹಾಲಹಳ್ಳಿ ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವಮಾದಪ್ಪ, ಪ್ರಭುಸ್ವಾಮಿ, ಮೃತ್ಯುಂಜಯ, ಶಿವನಾಗಪ್ಪ, ಎಪಿಎಂಸಿ ನಿರ್ದೇಶಕರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮತ್ತಿತರರಿದ್ದರು.