ಚಿಕ್ಕಬಳ್ಳಾಪುರ: ವೈಶಾಖ ಮಾಸದ ತೃತೀಯ ಇಂದು ಅಕ್ಷಯ ತದಿಗೆ ಈ ಶುಭದಿನದಂದು ಜನಿಸಿದವರು ಜಗಜ್ಯೋತಿ ಬಸವೇಶ್ವರ ರವರು ಹಾಗಾಗಿ ಬಸವ ಜಯಂತಿಯನ್ನು ನಗರದ ಬಸವಣ್ಣನ ದೇವಸ್ಥಾನದಲ್ಲಿ ಬಸವೇಶ್ವರ ರ ಅನುಯಾಯಿಗಳು ಭಕ್ತಿ ಪೂರ್ವಕವಾಗಿ ಬಸವಣ್ಣನ ಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಮಾಡುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.
ಇಂದು ನಗರದ ಗಾಂಧಿ ವೃತದ ಸಮೀಪ ಇರುವ ಬಸವಣ್ಣ ದೇವಾಲಯದಲ್ಲಿ ಬೆಳಗಿನಿಂದಲೇ ಬಸವಣ್ಣನ ಪ್ರತಿಮೆಗೆ ಹಾಲಿನ ಅಭಿಷೇಕ ವಿಶೇಷ ಪೂಜೆ ಹಾಗೂ ಬಸವಣ್ಣನವರ ಚಿತ್ರಪಟಕ್ಕೆ ವಿಶೇಷ ಪೂಜೆ ಏರ್ಪಡಿಸಿ ಪ್ರಸಾದ ವಿನಿಯೋಗ ಮಾಡಿದರು.ಮಧ್ಯಾಹ್ನ 1:00ಯ ನಂತರ ಬಸವಣ್ಣನವರ ಪ್ರತಿಮೆಯನ್ನು ಭವ್ಯವಾಗಿ ಸಿಂಗಾರಿ ಸಲಾದ ರಥದಲ್ಲಿ ಊರಿನಲ್ಲಿ ಮೆರವಣಿಗೆ ಮಾಡುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಅದೇ ರೀತಿ ಇಂದು ಬಸವ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಸರ್ಕಾರದ ವತಿಯಿಂದಲೂ ಬಸವ ಜಯಂತಿ ಆಚರಿಸಲು ಸರ್ವ ಸಿದ್ದತೆಗಳು ನಡೆದಿದೆ.12ನೇ ಶತಮಾನದಲ್ಲಿಯೇ ಬಸವೇಶ್ವರರು ಸಮಾಜದಲ್ಲಿ ಅಂದು ಪಿಡುಗಾಗಿದ್ದ ಕಂದಾಚಾರ ಜಾತಿ ವ್ಯವಸ್ಥೆ ಮೂಡನಂಬಿಕೆ ಮುಂತಾದ ಸಮಾಜದ ಅನಿಷ್ಠಗಳ ವಿರುದ್ಧ ಶಿವಮನ ಪರಿಯಂತ ಹೋರಾಟ ನಡೆಸಿದರು.
ಅವರು ಏಕದೇವೋಪಾಸನೆ ತತ್ವವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದರು. ಶತಶತಮಾನಗಳು ಕಳೆದರೂ ಸಹ ಬಸವೇಶ್ವರರ ತತ್ವ ನಿರಂತರವಾಗಿ ಜನರ ಹೃದಯದಲ್ಲಿ ಮನೆ ಮಾಡಿದ್ದು ಬಸವ ಜಯಂತಿ ಪ್ರಯುಕ್ತ ನಗರದ ಜನತೆ ಬಸವೇಶ್ವರ ರಿಗೆ ತಮ್ಮ ಗೌರವವನ್ನು ಇಂದು ಸಮರ್ಪಣೆ ಮಾಡಿದರು.