ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನ ಮುಕ್ತಾಯದ ನಂತರ ವಿಶೇಷ ಬೋನಸ್ ಮೊತ್ತವನ್ನು ಘೋಷಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೈದಾನದ ಸಿಬ್ಬಂದಿಯ ಅಮೂಲ್ಯ ಕೊಡುಗೆಯನ್ನು ಸ್ಮರಿಸಿಕೊಂಡಿದೆ. ಉತ್ತಮ ಪಿಚ್ ರೆಡಿ ಮಾಡಿದ ಮೈದಾನದ ಸಿಬ್ಬಂದಿಯೂ ಟೂರ್ನಿಯ ಯಶಸ್ಸಿನಲ್ಲಿ ಪಾಲು ಪಡೆಯುತ್ತಾರೆ ಎಂಬುದನ್ನು ಬಿಸಿಸಿಐ ಎತ್ತಿ ತೋರಿಸಿದೆ.
ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಂದ್ಯಾವಳಿಯುದ್ದಕ್ಕೂ ಉನ್ನತ ದರ್ಜೆಯ ಆಟವನ್ನು ಖಚಿತಪಡಿಸಿದ ಮೈದಾನದ ಸಿಬ್ಬಂದಿ ಮತ್ತು ಕ್ಯುರೇಟರ್ಗಳ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ನಮ್ಮ ಯಶಸ್ವಿ ಟಿ 20 ಋತುವಿನ ಅಪ್ರತಿಮ ಹೀರೋಗಳು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪಿಚ್ಗಳನ್ನು ಒದಗಿಸಿದ್ದಾರೆ. ದಣಿವರಿಯದೆ ಕೆಲಸ ಮಾಡಿದ ವಿಶೇಷ ಸಾಮರ್ಥ್ಯದ ಸಿಬ್ಬಂದಿ’ ಎಂದು ಶಾ ಹೇಳಿದ್ದಾರೆ.



