ನವದೆಹಲಿ: ಬರುವ ಅಕ್ಟೋಬರ್- ನವೆಂಬರ್‍ನಲ್ಲಿ ನಿಗದಿಯಾಗಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ದೃಷ್ಟಿಯಲ್ಲಿಟ್ಟು ಕೊಂಡು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕನಿಷ್ಠ ಐದು ಕ್ರೀಡಾಂಗಣಗಳನ್ನು ದೊಡ್ಡ ಪ್ರಮಾಣದಲ್ಲಿ ನವೀಕರಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ರೂ.500 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ.
ಆಟದ ಜನಪ್ರಿಯತೆಯಿಂದಾಗಿ ಬಿಸಿಸಿಐಗೆ ಭಾರಿ ಪ್ರಮಾಣದಲ್ಲಿ ಆದಾಯ ಹರಿದುಬರುತ್ತಿದೆ. ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಸಿಸಿಐ ಪಾತ್ರವಾಗಿದೆ. ಆದರೆ, ಟಿಕೆಟ್ ಖರೀದಿಸಿ ಬರುವ ಪ್ರೇಕ್ಷಕರು ಹೆಚ್ಚಿನ ಕ್ರೀಡಾಂಗಣಗಳಲ್ಲಿ ಸಮರ್ಪಕ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಫೆಬ್ರುವರಿ -ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ವೇಳೆ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ವಚ್ಛತೆಯಿಲ್ಲದ ಶೌಚಾಲಯದ ದುರವಸ್ಥೆ ಕಂಡು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ನವೀಕರ ಣಕ್ಕೆ ಉದ್ದೇಶಿಸಿರುವ ಐದು ಕ್ರೀಡಾಂಗಣದಲ್ಲಿ ದೆಹಲಿ ಕ್ರೀಡಾಂಗಣವೂ ಒಂದಾಗಿದೆ.
Leave a Review