ಬೆಂಗಳೂರು: ನೃತ್ಯಾಭ್ಯಾಸದಲ್ಲಿ ಗುರುಗಳ ಆರಾದನೆ ಮೂಲಕ ನಿತ್ಯ ನೂತನರಾಗಿ ಸಮಾಜದಲ್ಲಿ ಗೌರವ ಪಡೆಯಬೇಕೆಂದು ನೃತ್ಯ ಪಟುಗಳಿಗೆ ಸಾಯಿ ಆರ್ಟ್ ಇಂಟರ್ ನೇಷನಲ್ ನಿರ್ದೇಶಕರಾದ ಸಾಯಿ ವೆಂಕಟೇಶ್ ತಿಳಿಸಿದರು.
ಮಕ್ಕಳಿಗೆ ನೃತ್ಯ ಶಿಕ್ಷಣ ನೀಡುವುದು ಕಷ್ಟದ ಕೆಲಸ.ಮಕ್ಕಳು ಸಹಾ ಶ್ರದ್ದೆ ಇಂದ ಗುರುವುಗಳ ಬಳಿ ವಿನಯದೊಂದಿಗೆ ನೃತ್ಯ ಶಿಕ್ಷಣ ಪಡೆಯಬೇಕೆಂದರು.ನಮ್ಮ ಬೆಂಗುಳೂರು ದೇಶದ ವಿವಿಧ ಸಂಸ್ಕøತಿಗಳಿಗೆ ಕೆಂದ್ರವಾಗಿ ಎಲ್ಲದರನ್ನು ತನ್ನೊಳಿಗೆ ಅಡಿಗಿಸಿ ಕೊಂಡಿದೆ.ವಾರಾಂತ್ಯದಲ್ಲಿ ನಗರದ ಯಾವುದೋ ಒಂದು ಆಡಿಟೋರಿಯಮ್ ಗಳಲ್ಲಿ ಪುರಂಧರ ದಾಸರ ಕೀರ್ತನೆಗಳು,ಅನ್ನಮಯ್ಯ ಕೀರ್ತನೆಗಳು,ತ್ಯಾಗರಾಜರ ಕೀರ್ತನಗಳು ಅಲ್ಲದೇ ಆಂಧ್ರದ ಕೂಚಿಪೂಡಿ,ಕರ್ಣಾಟಕದ ಭರತನಾಟ್ಯ.
ಕೇರಳದ ಮೋಹಿನೀ ಅಟ್ಟಂ, ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡಿಯುತ್ತಾ ಇರುತ್ತೆ.ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡು ಎಲ್ಲರಿಗೂ ನ್ಯಾಯ ಒದಿಗಿಸುವ ಗುಣ ಈ ಮಣ್ಣಿ ನಲ್ಲಿದೆ.ಈ ನಿಟ್ಟಿನಲ್ಲಿ ಶನಿವಾರ ರಾತ್ರಿ ಜೆಪಿ ನಗರದ ಅರ್ಕ ಆಡಿಟೋರಿಯಮ್ ನಲ್ಲಿ ಒಡೆಸ್ಸೀ ಜನಗಳಿಂದ ಒಡೆಸ್ಸೀ ನೃತ್ಯ ಪ್ರದರ್ಶನವನ್ನು ನೃತ್ಯಧಾರ ಫೌಂಡೇಷನ್ ರವರು ಏರ್ಪಾಟು ಮಾಡಿದ್ದರು.
ಇಂತಹ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾದ ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷರಾವ್ ಮಾತನಾಡಿ ಒರಿಯಾರಾಜ್ಯದ ಜನ ಬಹುಳ ಕಲೆಗಾರರು.ಅವರು ಸಾಂಪ್ರದಾಯ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹೆಚ್ಚು ಶ್ರಮ ವಹಿಸುತ್ತಾರೆ ಎಂದರು. ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿನ ದೇವಾಲಯಗಳ ಬಗ್ಗೆ,ಸಾಂಪ್ರದಾಯ ಕಲೆಗಳನ್ನು ರಕ್ಷಿಸಲು ಒಡೆಸ್ಸೀ ಸರ್ಕಾರದ ಸಿಡಾಕ್ ಸಂಸ್ಥೆ ಮಾಡುತ್ತಿರುವ ಸೇವೆಗಳನ್ನು ತಿಳಿಸಿ ಬಟ್ಟೆಯ ಮೇಲೆ ಕಸೂತಿ ಕೆಲಸವನ್ನು ಮಾಡುವ ಪುರಿ ಬಳಿ ಇರುವ ಪಿಪೀಲಿ ಗ್ರಾಮದ 250 ಕುಟುಂಬಗಳ ಬಗ್ಗೆ ತಿಳಿಸಿದರು.ಒಡೆಸ್ಸೀ ನೃತ್ಯಗಳಲ್ಲಿನ ಪ್ರಾಧಾನ್ಯತೆಯನ್ನು ತಿಳಿಸಿದರು.
ಪ್ರಥಮದಲ್ಲಿ ದ್ರೌಪದಿ ವಸ್ತ್ರಾಪಹರಣ,ಹಿರಣ್ಯಕ ಶಿಪನ ವಧೆ, ದುರ್ಗಾದೇವಿಯ ನೃತ್ಯ ಮುಂತಾದ ನೃತ್ಯಗಳನ್ನು ಬಾಲಕೀಯರು ಅದ್ಭುತವಾಗಿ ಪ್ರದರ್ಶಿಸಿದರು. ಒಡೆಸ್ಸೀ ನೃತ್ಯಗಳಲ್ಲಿ ಮೃದಂಗ ವಾಯಿದ್ಯವನ್ನು ಹೆಚ್ಚು ಬಳಸುತ್ತಾರೆ. ವಸ್ತ್ರ ಧಾರಣೆ ಸಹಾ ಭರತನಾಟ್ಯಕ್ಕಿಂತಲೂ ವಿಭಿನ್ನ ವಾಗಿರುತ್ತೆ. ನೃತ್ಯಧಾರ ಫೌಂಡೇಷನ್ ವತಿ ಯಿಂದ ನೃತ್ಯ ಕಲೆಗೆ ಹೆಚ್ಚು ಸೇವೆ ಮಾಡುತ್ತಿರುವ ಶ್ರೀ ಶಕ್ತಿ ಆಟ್ರ್ಸ ನಿರ್ದೇಶಕರಾದ ಜೆಬಿ ಶರವಣನ್ ಪಿಳ್ಳೈ ರವರನ್ನು ನೃತ್ಯಧಾರ ಸಮ್ಮಾನ್ 2023 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
ಮೀಟಾಸೇತಿ ರವರ ನೃತ್ಯ ಹಾಗೂ ಅವರ ವಿಧ್ಯಾರ್ಥಿಗಳ ನೃತ್ಯ ಪ್ರದರ್ಶನ ಸಭಿಕರ ಮನಸೂರಗೊಂಡಿತು,ನೃತ್ಯ ಧಾರ ಪೌಂಡೇಷನ್ ಸಂಸ್ಥಾಪಕಿ ಪ್ರಮಿಶ್ರಾ ಅವರ ಶ್ರಮವನ್ನು ಅತಿಥಿಗಳ ಭಾಷಣದಲ್ಲಿ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ದೀಪಕ್ ದಿವ್ಯಾಂಗರ ಶಾಲೆಯ ಪ್ರಾಂಶುಪಾಲರಾದ ಸಿತಾ ಕೃಷ್ಣಮೂರ್ತಿ, ಡಾ.ಭವಾನಿ ಶಂಕರ್ ಮಿಶ್ರಾ,ಮುಂತಾದವರು ಭಾಗವಹಿಸಿದ್ದರು. ಸುಜಾತ ಗದ್ದೇಮನೆ ಹಾಗೂ ವಂದನಾ ಪಂಚಂ ರವರ ವಿವರಣಾತ್ಮಕವಾದ ನಿರೂಪಣೆ ಯಲ್ಲಿ ಕಾರ್ಯಕ್ರಮ ಅರ್ಥ ಗರ್ಭಿತವಾಗಿ ಮೂಡಿಬಂದಿತು. ತುಂಬಿದ ಸಭಾಂಗಣದಲ್ಲಿ ಪ್ರತಿ ನೃತ್ಯಕ್ಕೂ ಸಭಿಕರು ಚಪ್ಪಾಳೆ ಇಂದ ಕಲಾವಿದರನ್ನು ಪ್ರೋತ್ಸಹಿಸುತ್ತಿದ್ದರು.