ಬೆಂಗಳೂರು: ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ದೀಪಾವಳಿ ಹಬ್ಬಕ್ಕೆ ಮಿಂಟೋ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳ ಪಟಾಕಿ ಪ್ರಕರಣ ಎದುರಿಸಲು ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ ಮಾಡಲಗಿದೆ. ಮಕ್ಕಳಿಗೆ ಒಂದುಪ್ರತ್ಯೇಕ ವಾರ್ಡ್ ನಲ್ಲಿ ೧೨ ಬೆಡ್ ಗಳ ಮೀಸಲು ಇಡಲಾಗಿದೆ.
ಯುವಕರಿಗೆ ೧೦ ಬೆಡ್, ಮಹಿಳೆಯರಿಗೆ ೧೦ ಬೆಡ್ ಸೇರಿ ಒಟ್ಟು ೨೫ ಕ್ಕೂ ಅಧಿಕ ಬೆಡ್ ಮೀಸಲು ಇಡಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ೨೦ ಕ್ಕೂ
ಅಧಿಕ ಬೆಡ್ ಗಳು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಮಿಂಟೋದಲ್ಲಿ ತುರ್ತು ಚಿಕಿತ್ಸೆ,ಶಸ್ತ್ರ ಚಿಕಿತ್ಸೆಗೆ ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ.