ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಕಚೇರಿ ಆವರಣದಲ್ಲಿ 2023-24 ನೇ ಸಾಲಿನ ವಾರ್ಡ್ ಮತ್ತು ಗ್ರಾಮಸಭೆಯನ್ನು ಗ್ರಾ.ಪಂ ಅಧ್ಯಕ್ಷೆ ಕೆ. ಜೆ ಗೀತಾ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಸಭೆಯು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದು.
ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಸೂಕ್ತ ನಿರ್ಣಯಗಳಾಗಬೇಕು. ಆಡಳಿತ ಮಂಡಳಿಗೆ ಆಡಳಿತ ನಡೆಸುವಲ್ಲಿ ಸೂಕ್ತ ಸಲಹೆಗಳನ್ನು ನೀಡಿ. ವಿವಿಧ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಕ್ರಿಯರಾಗಿ ಗ್ರಾಮಸಭೆಯನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ತಯಾರಾಗಬೇಕಿದೆ, ಸಾರ್ವಜನಿಕರ ಕುಂದು ಕೊರತೆ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು.
ಪ್ರಶ್ನೆಗಳನ್ನು ಕೇಳಬೇಕಾದರೆ ಸ್ವಲ್ಪ ಆಲೋಚಿಸಬೇಕು ಗ್ರಾಮ ಸಭೆಯ ಜನರು ಜನಪ್ರತಿನಿಧಿಗಳು ಅಧಿಕಾರಿಗಳು ಈ ಮೂರು ಜನ ಕೂಡಿ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು ಸಮಸ್ಯೆಗಳ ಬಗ್ಗೆ ಆ ರೀತಿಯಲ್ಲಿ ಆರೋಗ್ಯಕರ ಪ್ರಶ್ನೆಗಳ ಮೂಲಕ ಚರ್ಚಿಸಿದಾಗಲೇ ಅಂತಹ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ ಎಂದರು.
ಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಗ್ರಾಮ ಸಭೆಯಲ್ಲಿ ವಿವರಿಸಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ 2023-24 ನೇ ಸಾಲಿನ ವರದಿ ಮಂಡಿಸಲಾಗಿ ಅಂಗೀಕಾರಗೊಂಡಿತು. ವಾರ್ಡ್ ಸಭೆಯಲ್ಲಿ ಬಂದಿದ್ದ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿ, ಮುಂದೆ ಆದ್ಯತಾನುಸಾರ ಕ್ರಿಯಾಯೋಜನೆಗಳಲ್ಲಿ ಸೇರಿಸಲು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ್, ಅಧಿಕಾರಿ ಪ್ರದೀಪ್ ಗ್ರಾ.ಪಂ ಸದಸ್ಯರಾದ ಪುಟ್ಟರಾಜು, ಚಂದ್ರಪ್ಪ, ಶಂಕರ್, ಲೋಕೇಶ್, ಸುಜಾತ ನಾಗರಾಜು,ಶಾರದ, ಲಲಿತಾ, ಮಮತಾ,ಸೋವಿತ,ಬೀರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ (ಕುಮಾರ್), ಹಿರಿಯ ಮುಖಂಡ ಪರಶುರಾಮ್ ,ಹೋಬಳಿ ಜೆಡಿಎಸ್ ಅಧ್ಯಕ್ಷರ ಬಸವಲಿಂಗಪ್ಪ, ಕುಮಾರ್, ಇಂದ್ರೇಶ್ , ಸತೀಶ್,ಮೊಗಣ್ಣಗೌಡ,ಸೇರಿದಂತೆ ಉಪಸ್ಥಿತರಿದ್ದರು.