ಕನಕಪುರ: ಅಗ್ನಿಕೊಂಡ ನೆರವೇರಿಸುವ ಮುನ್ನವೇ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾವತ್ತೂರು ಗ್ರಾಮದಲ್ಲಿ ವರದಿಯಾಗಿದೆ. ತಾಲೂಕಿನ ಮಾವತ್ತೂರು ಗ್ರಾಮದ ಮಾವತ್ತೂರಮ್ಮ ದೇವಿಯ ಪ್ರಧಾನ ಅರ್ಚಕ ನಾಗರಾಜು (50) ಮೆರವಣೆಗೆಯ ಮೂಲಕ ದೇವರನ್ನು ಕರೆತರುವಾಗ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದೆ, ಸಡಗರ ಸಂಭ್ರಮದಿಂದ ಹಬ್ಬ ಆಚರಣೆ ಮಾಡಬೇಕಾದ ಗ್ರಾಮದಲ್ಲಿ ಅರ್ಚಕರ ಸಾವಿನಿಂದ ನೀರವ ಮೌನ ಆವರಿಸಿದೆ.
ಮಾವತ್ತೂರಮ್ಮ ದೇವಿಯ ಅಗ್ನಿಕೊಂಡೋತ್ಸವದ ಅಂಗವಾಗಿ ಭಾನುವಾರದಿಂದಲೇ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿತ್ತು ಭಾನುವಾರ ದೇವಾಲಯದಲ್ಲಿ ಹೋಮ ಹವನ ಮತ್ತು ಅಕ್ಕಪಕ್ಕದ ಏಳು ಗ್ರಾಮಗಳಿಂದ ಯಳವಾರದ ಮೂಲಕ ಕಟ್ಟಿಗೆ ತಂದು ಅಗ್ನಿಕೊಂಡೋತ್ಸವಕ್ಕೆ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗಿತ್ತು ಕಳೆದ ಏಳು ವರ್ಷಗಳಿಂದ ಕೊಂಡ ಹಾಯುತ್ತಾ ಬಂದಿದ್ದ ಅರ್ಚಕ ನಾಗರಾಜು ಎಂಟನೇ ವರ್ಷ ಕೊಂಡ ಹಾಯುಲು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ ಭಾನುವಾರದಿಂದ ಸೋಮವಾರ ಬೆಳಿಗ್ಗೆ ಕೊಂಡ ಹಾಯುವವರೆಗೂ ಉಪವಾಸ ಆಚರಣೆಯಲ್ಲಿದ್ದರು ಹಣ್ಣು ಹಂಪಲು ಹೊರತುಪಡಿಸಿ ಬೇಯಿಸಿದ ಯಾವುದೇ ಆಹಾರವನ್ನು ಸೇವನೆ ಮಾಡಿರಲಿಲ್ಲ.
ಸೋಮವಾರ ಬೆಳಗ್ಗೆ ಯರೇನಹಳ್ಳಿ ಗ್ರಾಮದಲ್ಲಿರುವ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ದೇವರನ್ನು ಕರೆತಂದು ಮಾವತ್ತೂರು ಗ್ರಾಮದಲ್ಲಿ ಬಳಿ ಮೇಕೆ ಯನ್ನು ಬಲಿಕೊಟ್ಟು ಅಲ್ಲಿಂದ ಗ್ರಾಮಸ್ಥರು ದೇವರಿಗೆ ಮಡಿಲ ಅಕ್ಕಿ ಕಟ್ಟಿ ಅಗ್ನಿಕೊಂಡ ನೆರವೇರಿಸಲು ಮೆರವಣಿಗೆ ಮೂಲಕ ದೇವರನ್ನು ಕರೆತರುವಾಗ ದೇವಾಲಯದಿಂದ 500 ಮೀಟರ್ ದೂರದಲ್ಲಿ ಭಕ್ತ ರೊಬ್ಬರು ದೇವರಿಗೆ ಮಡಿಲ ಅಕ್ಕಿ ಕಟ್ಟುವಾಗ ಅದೇ ಗ್ರಾಮದ ಮಹಿಳೆಯೋಬ್ಬರು ಮೈಮೇಲೆ ಯಾವುದೋ ಕಾಣದ ಶಕ್ತಿ ಮೈಮೇಲೆ ಪ್ರವೇಶವಾದಂತೆ ಕುಣಿಯಲಾರಂಭಿಸಿದ್ದರು.
ಕೊಂಡ ಹಾಯಲು ಗಿಂಡಿಯನ್ನು ಹೊತ್ತು ಸಾಗುತ್ತಿದ್ದ ಅರ್ಚಕ ನಾಗರಾಜು ಬೆತ್ತದ ಕೋಲಿನಿಂದ ಆ ಮಹಿಳೆಗೆ ಎರಡ್ಮೂರು ಬಾರಿ ಹೊಡೆದರಂತೆ ಬಳಿಕ ಆ ಮಹಿಳೆ ಅರ್ಚಕರ ಕಾಲು ಹಿಡಿದು ಆಶೀರ್ವಾದ ಪಡೆಯಲು ಯತ್ನಿಸಿದ್ದಾಳೆ ಕಾಕತಾಳಿಯ ಎಂಬಂತೆ ಅದೇ ಸಂದರ್ಭ ದಲ್ಲಿ ಅರ್ಚಕ ನಾಗರಾಜು ಕುಸಿದು ಬಿದ್ದಿದ್ದಾರೆ ತಕ್ಷಣ ನಗರದ ಕನಕ ಆಸ್ಪತ್ರೆಗೆ ಕರದೊಯ್ಯಲಾಗಿತ್ತು ಆದರೆ ಮಾರ್ಗ ಮಧ್ಯೆ ಅರ್ಚಕ ನಾಗರಾಜ್ ಮೃತಪಟ್ಟಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಹಬ್ಬಕ್ಕೆ ಬಂದಿದ್ದ ನೆಂಟರು ಇಷ್ಟರೊಂದಿಗೆ ಸಡಗರ ಸಂಭ್ರಮದಿಂದ ಗ್ರಾಮ ದೇವತೆಯ ಹಬ್ಬ ಆಚರಿಸಬೇಕಿದ್ದ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ.
Leave a Review