ಬೆಂಗಳೂರು: ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ ಕೋಟಕ್ ಮಹೀಂದ್ರಾ ಎಟಿಎಂ ಕೌಂಟರ್ ಬಳಿ ಅಪರಿಚಿತ ಬಿಕ್ಷುಕರ ತರಹ ಕಾಣುವ ವ್ಯಕ್ತಿ ಯೂನಿಕ್ ಐಡೆಂಟಿಟಿ ನಂಬರ್ ಇರುವ ಬಾಕ್ಸ್ ಗಳನ್ನು ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಾರಣ ಕಲಾಸಿಪಾಳ್ಯ ಪೊಲೀಸರು ದೂರನ್ನು ದಾಖಲಿಸಿ ಕೊಂಡು ತನಿಖೆ ಮುಂದುವರಿಸಿರುತ್ತಾರೆ.
ಮಹೇಂದ್ರ ಕೋಟಕ್ ಎಟಿಎಂಗೆ ಏನು ತೊಂದರೆಯಾಗಿಲ್ಲವೆಂದು ಡಿಸಿಪಿ ರವರು ಸ್ಪಷ್ಟಪಡಿಸಿದರು ಈ ಬಾಕ್ಸ್ ಗಳು ಯಾವುದೆಂದು ತನಿಖೆ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.