ಯಶಸ್ವಿ ರಿಯಲಿಟಿ ಶೋ `ಬಿಗ್ ಬಾಸ್ ಕನ್ನಡ’ ಸೀಸನ್-೧೧ರಲ್ಲಿ `ಸ್ವರ್ಗ ನರಕ’, ಪರಲೋಕದ ಉಲ್ಲಾಸಗಳು ಜನರ ಮೆಚ್ಚುಗೆಯನ್ನು ಗಳಿಸಿತ್ತು. ಈ ಬಾರಿ `ಕಲರ’ಸ್ ಕನ್ನಡ’ ವಾಹಿನಿ ಬಿಗ್ಬಾಸ್ ಸೀಸನ್-೧೨ರಲ್ಲಿ `ಅನಿರೀಕ್ಷಿತವನ್ನು ನಿರೀಕ್ಷಿಸಿ’ ಶೀರ್ಷಿಕೆಯಲ್ಲಿ ವೀಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ. ಹಾಗೆಯೇ ಭಾರತದ ಅತಿದೊಡ್ಡ ರಿಯಾಲಿಟಿ ಶೋ ಅಂತ ಸಂಪೂರ್ಣವಾಗಿ ಹೊಸ ರೂಪದಲ್ಲಿ, ಉತ್ತಮ ಮತ್ತು ಹೆಚ್ಚು ಮನರಂಜನೆಯ ಯಾತ್ರೆಯೊಂದಿಗೆ ಬರುತ್ತಿದೆ.
ಸದರಿ ರಿಯಾಲಿಟಿ ಶೋ ಗ್ರಾಂಡ್ ಒಪನಿಂಗ್ ಇದೇ ೨೮ ಭಾನುವಾರ, ಸಂಜೆ ೬ ಗಂಟೆ. ನಂತರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯.೩೦ಕ್ಕೆ, ಕಲರ’ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ದಲ್ಲಿ ವೀಕ್ಷಿಸಬಹುದಾಗಿದೆ. ಹಾಗೂ ೨೪ ಗಂಟೆ ಲೈವ್ ಚಾನೆಲ್ ಜಿಯೋ ಹಾಟ್ಸ್ಟಾರ್ ಆಪ್ದಲ್ಲಿ ನೋಡಬಹುದು. ಅಲ್ಲದೆ ಶನಿವಾರ ಮತ್ತು ಭಾನುವಾರ ವಾರದ ವಿಶೇಷ ಕಂತುಗಳು ರಾತ್ರಿ ೯ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ನ ಸಾರಥಿಯಾಗಿ ಎಂದಿನAತೆ ಈ ಬಾರಿಯೂ ಕಿಚ್ಚ ಸುದೀಪ್ ಇರುವುದು ಶೋಗೆ ಕಳಸ ಇಟ್ಟಂತೆ ಆಗುತ್ತದೆ.
ಅವರ ಕಂಚಿನ ಕಂಠದ ಮಾತುಗಳು, ಮೊನಚು ವ್ಯಕ್ತಿತ್ವ, ನಿಬ್ಬೆರಗಾಗಿಸೋ ವೈಖರಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ, ತಪ್ಪಿದೋರನ್ನ ತಿದ್ದೋ ಗಟ್ಟಿತನ, ಪ್ರತಿ ಬಾರಿ ಸಂದೇಶ ಹೇಳುವುದು. ಇವೆಲ್ಲವುದನ್ನು ನೋಡೋದಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಪ್ರತಿ ಸೀಸನ್ ಮಜಲಿನಲ್ಲಿ ಅಪೂರ್ವ ಮನರಂಜನೆ ಮತ್ತು ಭಾವನೆಗಳ ರೋಲರ್ ಕೋಸ್ಟರ್ ರೋಚಕ ಪ್ರಯಾಣ ಇರಲಿದೆ. ಪ್ರಸ್ತುತ ಸೀಸನ್ನಲ್ಲಿ ವಿವಿಧ ಉದ್ಯಮಗಳು, ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು, ಪ್ರಭಾವಿಗಳು ಹಾಗೂ ಸ್ಪರ್ಧಿಗಳ ವೈವಿಧ್ಯಮಯ ಮಿಶ್ರಣವಿದೆ.
ವಿಶಾಲವಾದ ಮನೆಯಲ್ಲಿ ವಿಸ್ತಾರವಾದ ಆಟಗಳು, ಹೈ ವೋಲ್ಟೇಜ್ ಡ್ರಾಮಾ, ಆಕರ್ಷಕ ತಿರುವುಗಳು, ಅನಿರೀಕ್ಷಿತ ಆಶ್ಚರ್ಯಗಳು, ಬಿಸಿಯಾದ ಸಂಘರ್ಷಗಳು, ಆಕಾಶ ಎತ್ತರ ಸವಾಲು ಜತೆಗೆ ಮರೆಯಲಾಗದ ಕ್ಷಣಗಳನ್ನು ಖಚಿತಪಡಸುತ್ತದೆ. ಜಿಯೋ ಹಾಟ್ಸ್ಟಾರ್ನಲ್ಲಿ ಜೀತೋ ಧನ್ ಧನಾ ಧನ್ ಎಂಬ ವಿನೂತನ ಸ್ಪರ್ಧೆಯಲ್ಲಿ ಸರಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ವೀಕ್ಷಕರು ಚಿನ್ನದ ನಾಣ್ಯ ಗೆಲ್ಲಬಹುದಾಗಿದೆ. ವಾರಾಂತ್ಯದ ಕAತಿನಲ್ಲಿ ಬಳಕೆದಾರರ ನಿರ್ಮಿತ ಮೀಮ್ಸ್ ಪ್ರದರ್ಶಿಸುತ್ತದೆ.ಇಷ್ಟವಾದವರನ್ನು ಉಳಿಸಲು ಮತದಾನ ಮುಖ್ಯವಾಗಿದೆ.