ಕಿರುತೆರೆ ಲೋಕದಲ್ಲಿ ಹಲವಾರು ಸೃಜನಾತ್ಮಕ ಕಾರ್ಯಕ್ರಮಗಳನ್ನು ನೀಡಿ ಕನ್ನಡಿಗರ ಮನದಲ್ಲಿ ಭದ್ರವಾದ ಸ್ಥಾನಗಳಿಸಿರುವ ಸಿರಿಕನ್ನಡ ವಾಹಿನಿ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ವೀಕ್ಷಕರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಲು ಮುಂದಾಗಿದೆ.
ಇದೇ ಅಕ್ಟೋಬರ್ 30 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಅಮೃತಘಳಿಗೆ ಹೊಸ ಮೆಗಾ ಧಾರಾವಾಹಿ ಆರಂಭವಾಗಲಿದೆ.ಕಿರುತೆರೆಯ ಖ್ಯಾತ ನಿರ್ದೇಶಕ, ಬರಹಗಾರ ರವಿ ಆರ್ ಗರಣಿಯವರ ಸಾರಥ್ಯದಲ್ಲಿ ಈ ಧಾರಾವಾಹಿಯ ಕಥೆ ಮೂಡಿಬರುತಿದ್ದು, ಹೆಸರಾಂತ ನಿರ್ದೇಶಕರಾದ ಭಾರತೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಖ್ಯಾತ ಕಲಾವಿದರೊಂದಿಗೆ ಹೊಸ ಕಲಾವಿದರ ಸಂಗಮವಿರುವ ಈ ಧಾರಾವಾಹಿ ವೀಕ್ಷಕರ ಮನ ಮುಟ್ಟುವಂತಿದೆ.