ಚಳ್ಳಕೆರೆ: ತಾಲ್ಲೂಕಿನ ಬೆಳಗೆರೆ ನಾರಾಯಣಪುರ ಗ್ರಾಮಸ್ಥರ ತಮ್ಮ ಆರಾದ್ಯ ದೈವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ. ಜಾತ್ರಾಮಹೋತ್ಸವ ಹಮ್ಮಿ ಕೊಂಡಿದ್ದಾರೆ.
ಏ 20 ರಿಂದ ಏ 25 ರವರೆಗೆ ಬೆಳಗೆರೆ ಕೆರೆಯ ಬಳಿ ಇರುವ ಲಕ್ಷ್ಮಿರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.ಪುರೋಹಿತ ಯಾದಾಟು ವಂಶಸ್ಥ ರಾದ ಶ್ರೀ ಮುರುಳೀಧರ ಜಾಸ್ತ್ರಿ ಅವರ ಪೌರೋಹಿತ್ಯ ದಲ್ಲಿ ಏ 20 ರ ಶನಿವಾರ ಸ್ವಾಮಿಯ ಮೂರ್ತಿಯನ್ನು ಬೆಳಗೆರೆಯಿಂದ ಸಂಜೆ ನಾರಾಯಣಪುರದ ಗೊಂಚಿಗಾ ರರ ಮನೆಯಲ್ಲಿ ಇರಿಸಿ.
ಆ ದಿನ ದಾಸೋಹ ಮತ್ತು ಶಯ ನೋತ್ಸವ ಮುಗಿಸಿ ಮುಂಜಾನೆ ರಂಗನಾಥಪುರ ತಲುಪಿ ನಂತರ ಬೆಳಗೆರೆ ಸೇರುವುದು.ಏ 21 ರ ಭಾನುವಾರ ಸಂಜೆ ಮೂರು ಗಂಟೆಗೆ ಬೆಳಗೆರೆಯಲ್ಲಿ ದಾಸೋಹ ಸಂಜೆ ಏರಿ ಬುಡದ ಪ್ರಧಾನ ದೇಗುಲಕ್ಕೆ ತೆರಳಿ ನಂತರ ಗಂಗಾಪೂಜೆ ರಕ್ಷಾಬಂಧನ ಕಾರ್ಯಕ್ರಮಗಳು ಜರುಗುವುವು.
ಏ 22 ರ ಸೋಮವಾರ ದೇವಸ್ಥಾನ ದ ಬಳಿ ಹೋಮ ಹವನಾದಿಗಳು ಏ 23 ಮಂಗಳ ವಾರ ಸೈತ್ರಪೌರ್ಣಮಿ ಯಂದು ಬೆಳಗ್ಗೆ 9-30 ರಿಂದ 12 ರವರೆಗೆ ಸಲ್ಲುವ ಮಿಥುನ ಲಗ್ನ ಪುಷ್ಕರಾಂಶದಲ್ಲಿ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ ಪ್ರಾಣ ಗ್ರಹಣ, ಮಹೋತ್ಸವ.
ನಂತರ ಹಿಟ್ಟಿನಾರತಿ ಸೇವೆ, ಸಂಜೆ ಅರಿವೆಯನ್ನ ಕಾರ್ಯಕ್ರಮ, ಏ 24 ರ ಬುಧವಾರ ಸಂಜೆ 4 ಗಂಟೆಗೆ ಸ್ವಾಮಿಯ ಬ್ರಹ್ಮ ರಥೋತ್ಸವ ಏ 25 ರ ಸಂಜೆ ಸ್ವಾಮಿಯ ವಸಂತೋತ್ಸವ ಕಂಕಣ ವಿಸರ್ಜನೆ, ಸಂಜೆ 6 ಗಂಟೆಗೆ ಬೆಳಗೆರೆ ಗ್ರಾಮ ಕ್ಕೆ ಪಯಣ ನಂತರ ಗುಡಿದುಂಬು ವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.