ಬಳ್ಳಾರಿ: ಬಳ್ಳಾರಿ ಐಜಿಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ವಗಾವಣೆ ಮಾಡಲಾಗಿದೆ.
ಈಗಾಗಲೇ ಬಳ್ಳಾರಿ ಬ್ಯಾನರ್ ಗಲಾಟೆ ಹಿನ್ನೆಲೆಯಲ್ಲಿ ಎಸ್ಪಿ ಪವನ್ ಅವರನ್ನು ಸೇವೆಯಿಂದ ಅಮಾನತುಗೊಳಿಸ ಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಐಜಿಪಿ ಅವರನ್ನು ಸಿವಿಲ್ ರೈಟ್ಸ್ & ಎನ್ಪೋರ್ಸೆಮೆಂಟ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಜಾಗಕ್ಕೆ ಡಾ. ಪಿ.ಎಸ್. ಹರ್ಷ ಅವರನ್ನು ನೇಮಿಸಲಾಗಿದೆ.
ಬಳ್ಳಾರಿ ಎಸ್ಪಿಯಾಗಿ ಗುಪ್ತಚರ ವಿಭಾಗದಲ್ಲಿದ್ದ ಡಾ. ಸುಮನಾ ಡಿ ಪನ್ನೇಕರ್ ಅವರನ್ನು ನೇಮಿಸಲಾಗಿದೆ.
ಬಳ್ಳಾರಿ ಡಿಐಜಿಪಿ ವರ್ಗಾವಣೆ



