ಬಂಗಾರಪೇಟೆ: ತಾಲೂಕಿನ ಕಾಮಸಮು ದ್ರದಲ್ಲಿರುವ ಬೆಂಗಳೂರು-ಚನೈ ರೈಲ್ವೆ ಮಾರ್ಗದಲ್ಲಿ ರೈಲ್ವೆ ಗೇಟ್ ಕೆಟ್ಟು ಹೋಗಿರುವ ಹಿನ್ನಲೆಯಲ್ಲಿ ಕಿ.ಮೀ ಗಳಷ್ಟುಸಾವಿರಾರು ವಾಹನಗಳ ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರಯಾಣಿಕರು ತೀವ್ರ ಸಂಕಷ್ಠಕ್ಕೆ ಒಳಗಾಗಿದ್ದ ಘಟನೆ ಶುಕ್ರವಾರ ನಡೆದಿದೆ.ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿರುವ ರೈಲ್ವೆ ಗೇಟ್ ತೆರೆಯುವುದಕ್ಕೆ ತಾಂತ್ರಿಕ ದೋಷದಿಂದ ಸುಮಾರು 1 ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಯಿತು. ಕೆಲಸಕ್ಕೆ ತೆರಳುತ್ತಿದ್ದವರು ಹಾಗೂ ಶಾಲೆ, ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ತಲುಪಲು ಸಾಧ್ಯವಾಗದೆ ಸಂಕಷ್ಟಅನುಭವಿಸಿದರು.ರೈಲ್ವೆ ಗೇಟ್ ದೀರ್ಘಕಾಲ ಮುಚ್ಚಿದ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ದೀರ್ಘ ಸಾಲು ಕಂಡುಬಂತು. ಬೈಕ್, ಕಾರು, ಬಸ್ ಸೇರಿದಂತೆ ಹಲವಾರು ವಾಹನಗಳು ನಿಂತಿದ್ದರಿAದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಹಾಗೂ ತರಗತಿಗಳಿಗೆ ತಡವಾಗಿ ತಲುಪಿದರೆ, ಕೆಲಸಗಾರರು ತಮ್ಮ ಕಚೇರಿಗಳಿಗೆ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ.ದಕ್ಷಿಣ ಭಾರತದ ವ್ಯಾಪಾರ ಮತ್ತು ಸಂಪರ್ಕದ ಜೀವನಾಡಿಯಾಗಿರುವ ಬೆಂಗಳೂರು-ಚೆನ್ನೈ ರೈಲು ಮಾರ್ಗವು ಪ್ರತಿದಿನ ನೂರಾರು ಎPಕ್ಸ್ ಪ್ರೆಸ್ ರೈಲುಗಳ ವೇಗಕ್ಕೆ ಸಾಕ್ಷಿಯಾಗುತ್ತದೆ. ಶತಾಬ್ದಿ, ವಂದೇ ಭಾರತ್, ಕುಚುವಲಿ ಸೇರಿದಂತೆ ದೇಶದ ವಿವಿಧ ಪ್ರಮುಖ ಸ್ಥಳಗಳಿಂದ ಐಷಾರಾಮಿ ರೈಲುಗಳು ಇಲ್ಲಿ ಮಿಂಚಿನ ವೇಗದಲ್ಲಿ ಚಲಿಸುತ್ತವೆ. ಆದರೆ, ತಾಲೂಕಿನ ಕಾಮಸಮುದ್ರ ರೈಲ್ವೆ ಗೇಟ್ ಬಳಿ ಬಂದಾಗ ಈ ಅಭಿವೃದ್ಧಿಯೇ ಇಲ್ಲಿನ 50ಕ್ಕೂ ಹೆಚ್ಚು ಹಳ್ಳಿಗಳ ಪಾಲಿಗೆ ಸಂಕಷ್ಟದ ಬೇಲಿಯಾಗಿ ಮಾರ್ಪಡುತ್ತದೆ.ಕಾಮಸಮುದ್ರ ಹೋಬಳಿಯ ಜನಸಾಮಾನ್ಯರ ಸಂಕಷ್ಟವೂ ಇಮ್ಮಡಿಯಾಗಿದೆ. ದಿನದ 24 ಗಂಟೆಗಳಲ್ಲಿ ಸುಮಾರು 60ಕ್ಕೂ ಹೆಚ್ಚು ರೈಲುಗಳು ಇಲ್ಲಿ ಹಾದುಹೋಗುತ್ತವೆ. ಇದರಿಂದಾಗಿ ಪ್ರತಿ 15-20 ನಿಮಿಷಕ್ಕೊಮ್ಮೆ ರೈಲ್ವೆ ಗೇಟ್ ಮುಚ್ಚಲಾಗುತ್ತದೆ, ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಬಂಗಾರಪೇಟೆ, ಕೆಜಿಎಫ್ ಮತ್ತು ಬೆಂಗಳೂರನ್ನು ಸಂಪರ್ಕಿಸಲು ಇದೇ ಏಕೈಕ ಪ್ರಮುಖ ರಸ್ತೆಯಾಗಿದೆ. ಆದರೆ, ಪ್ರತಿ ದಿನದ ಬಹುಪಾಲು ಸಮಯ ಗೇಟ್ ಮುಚ್ಚಿರುವುದರಿಂದ ಇದು ಸಂಪರ್ಕ ಸೇತುವೆಯಾಗುವ ಬದಲು ಜನರ ಸಂಚಾರಕ್ಕೆ ಅಡ್ಡಗೋಡೆಯಾಗಿದೆ.
ಕಾಮಸಮುದ್ರ ಭಾಗದ 50ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಎಂಬುದು ಇಂದಿಗೂ ದೂರದ ಬೆಟ್ಟಸ್ಥಳೀಯವಾಗಿ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾರಣ, ಯಾವುದೇ ತುರ್ತು ಸಂದರ್ಭ ಎದುರಾದರೂ ಜನರು ಬಂಗಾರಪೇಟೆ ಅಥವಾ ಕೆಜಿಎಫ್ ಆಸ್ಪತ್ರೆಗಳನ್ನೇ ನಂಬಿಕೊAಡಿದ್ದಾರೆ. ಆದರೆ, ಈ ಹಾದಿಯಲ್ಲಿರುವ ರೈಲ್ವೆ ಗೇಟ್ ಜನರ ಪಾಲಿಗೆ ಸಾವಿನ ದೂತನಂತೆ ಭಾಸವಾಗುತ್ತಿದೆ.
ಕಾಮಸಮುದ್ರ ಒಂದು ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಕಳೆದ ಮೂರು ದಶಕಗಳ ಬೇಡಿಕೆ. ಸರ್ಕಾರಗಳು ಬದಲಾದರೂ, ಜನಪ್ರತಿನಿಧಿಗಳು ಬಂದು ಹೋದರೂ ಸಹ ಕಾಮಸಮುದ್ರದ ಜನರ ಹಣೆಬರಹ ಮಾತ್ರ ಬದಲಾಗಿಲ್ಲ. ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯದ ಕೊರತೆಯೋ ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯೋ ಒಟ್ಟಿನಲ್ಲಿ ಇಲ್ಲಿನ ಜನ ಮಾತ್ರ ನರಕ ದರ್ಶನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಈ ರೈಲ್ವೆ ಗೇಟ್ ಬಳಿ ಪದೇ ಪದೇ ಇಂತಹ ಸಮಸ್ಯೆಗಳು ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಂಬAಧಪಟ್ಟಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಶಾಶ್ವತವಾಗಿ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈಲ್ವೆ ಗೇಟ್ ಕೆಟ್ಟು ನಿಂತ ಬೆಂಗಳೂರು-ಚನೈ ರೈಲ್ವೆ ಮಾರ್ಗ: ಪ್ರಯಾಣಿಕರು ತೀವ್ರ ಸಂಕಷ್ಟ



