ಬೆಂಗಳೂರು: ಬೆಂಗಳೂರು ಮಹಾನಗರದ ವಿವಿಧ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಅಪರಾಧಿ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು ಬಂಧಿಸಿ ಅಪಾರ ಮೊತ್ತದ ಬೆಲೆಬಾಳುವ ಚಿನ್ನ, ಮೊಬೈಲ್, ದ್ವಿಚಕ್ರ ವಾಹನ, ಲ್ಯಾಪ್ಟಾಪ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 25 ಲಕ್ಷ ರೂ. ಬೆಲೆ ಬಾಳುವ ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿರುತ್ತಾರೆ.
ತಮಿಳುನಾಡು ಮೂಲದವರಾದ ಆರೋಪಿಗಳು ಪಿಜಿ ಹಾಗೂ ಇತರಡೆ ಲ್ಯಾಪ್ಟಾಪ್ಗಳನ್ನುಕಳವು ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿರುತ್ತಾರೆ, ಇವುಗಳ ಮೌಲ್ಯ 10 ಲಕ್ಷ ರೂಪಾಯಿಗಳಾಗಿರುತ್ತದೆ.
ಚಂದ್ರ ಲೇಔಟ್ ಪೊಲೀಸರು ಮೊಬೈಲ್ ದರೋಡೆ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗೆ ನಡೆದ ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ದೂರು ದಾಖಲಿಸಿಕೊಂಡು ಸುಮಾರು ಆರೂವರೆ ಲಕ್ಷ ಬೆಲೆಗಳು ಇತರೆ ಒಟ್ಟು 30 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಮಹದೇವಪುರ ಪೊಲೀಸರು ಓರ್ವ ಆರೋಪಿ ಬಂಧಿಸಿ ಸುಮಾರು 4:30 ಲಕ್ಷ ಬೆಲೆಬಾಳುವ 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು 72,000 ನಗದನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳು ಇತ್ತೀಚೆಗೆ ಮೀಡಿಯಾದಾರರು ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸ್ ಆಯುಕ್ತರುಈ ಆರೋಪಿಗಳು ಅದೇ ದಿನ ಟಿನ್ ಫ್ಯಾಕ್ಟರಿ ಬಳಿ ಬಸ್ಸನ್ನು ಹತ್ತುವ ಸಮಯದಲ್ಲಿ ಪೊಲೀಸರಿಗೆ ಬಂದ ಮಾಹಿತಿ ಪ್ರಕಾರ ಬಂಧಿಸಿ ಫಲವಾಗಿದ್ದ ಹಾಗೂ ಬೇರೆ ಕಡೆ ಕಳುವು ಮಾಡಿದ್ದ ಆಭರಣಗಳನ್ನು ಸಹ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.