ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಸಂವಹನ ವಿಭಾಗದ ಅದ್ದೂರಿ ಸ್ವಾಗತ ಕೂಟ ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ ಡಾ. ಬಿ. ಶೈಲಶ್ರೀರವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಶಿಸ್ತು ಬದ್ಧವಾಗಿ ಅಧ್ಯಯನ ನಡೆಸಿದರೆ ಯಶಸ್ವಿಯಾಗಲು ಪೂರಕವಾಗಲಿದೆ. ಇನ್ನು ಕಾಲೇಜು ಹಂತಗಳಲ್ಲಿ ಸರಿಯಾಗಿ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಕೌಶಲ್ಯಗಳನ್ನು ಕಲಿತರೆ ಮುಂಬರುವ ದಿನಗಳಲ್ಲಿ ನಾನಾ ರೀತಿಯ ಮಾಧ್ಯಮಗಳಲ್ಲಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ, ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಬಹುದೆಂದು ಮತ್ತಿತರ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ವಸುಂಧರಾ ಪ್ರಿಯದರ್ಶಿನಿರವರು ಇವರು ಮಾತನಾಡಿದರು. ನಂತರ ಕಾರ್ಯಕ್ರಮದ ಅಂಗವಾಗಿ ಮುಂಚಿತವಾಗಿ ಏರ್ಪಡಿಸಿದ್ದ ವಿಭಾಗದಿಂದ ಹಲವಾರು ಕ್ರೀಡಾ, ಸಾಂಸ್ಕೃತಿಕ, ಮತ್ತಿತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ವಿಭಾಗದ ಮುಖ್ಯಸ್ಥರು ಪ್ರೊ . ಡಾ. ಬಿ.ಶೈಲಶ್ರೀರವರು ಬಹುಮಾನ ನೀಡಿದರು.
ವಿಭಾಗದ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಯನ ಸ್ಪರ್ಧೆಗಳು, ಮತ್ತಿತರ ಆಯೋಜಿಸಲಾಯಿತು.ಇದೇ ಸಂದರ್ಭದಲ್ಲಿ ಬೋಧಕೇತರ ಸಿಬ್ಬಂದಿಗಳಾದ ನಾಗೇಶ್ ಕೆ.ಎಸ್, ಮಂಜುನಾಥ್, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಮತ್ತಿತರ ವಿದ್ಯಾರ್ಥಿ ಸಮೂಹದವರು ಪಾಲ್ಗೊಂಡಿದ್ದರು.