ಬೆಸ್ಕಾಂ ಎಂ.ಡಿ, ಶಿವಶಂಕರ್ ಅವರನ್ನು ಕೆಇಬಿ ಪಿಂಚಣಿದಾರರ ಸಂಘದ ನೂತನ ಪದಾಧಿಕಾರಿಗಳು ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದಿಸಿ ದರು. ಹಾಗೂ ನೂತನವಾಗಿ ರಚನೆಗೊಂಡ ಸಂಘದ ಉತ್ತರ ಸಮಿತಿಗೆ ಕಚೇರಿಗಾಗಿ ಬೆಸ್ಕಾಂ ನೂತನ ಕಟ್ಟಡಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿ ಕೊಡಬೇಕಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಇಬಿ ಪಿಂಚಣಿದಾರರ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷರು ಹಾಗೂ ಬೆಂಗಳೂರು ಉತ್ತರ ಮಾರ್ಗದರ್ಶಕರು ಆದ ಜಿ. ರಾಜು, ಬೆ.ವಿ.ಕಂ ನಗರ ಉಪಾಧ್ಯಕ್ಷರು ಆರ್ ರಾಮಪ್ಪ, ಬೆಂಗಳೂರು ಉತ್ತರ ಸಂಚಾಲಕರಾದ ಎಚ್.ಜಯಣ್ಣ, ಸಹ ಸಂಚಲಕರಾದ ಜಿ.ಸಂಪಂಗಿರಾಮ ಹಾಗೂ ಎಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



