ಮುಳಬಾಗಲು: ಬಿರು ಬೇಸಿಗೆ ಬಿಸಿಲಿನಿಂದ ರೈತರ ಬೆಳೆ ರಕ್ಷಣೆಗೆ 10 ತಾಸುಗಳ ಗುಣಮಟ್ಟದ ವಿದ್ಯುತ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿ ಏ.20 ಗುರುವಾರ ನಷ್ಟ ಬೆಳೆ ಸಮೇತ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಬೆಸ್ಕಾಂ ನಿರ್ಲಕ್ಷದಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ನಷ್ಟವಾದರೆ ಆಯಾ ವ್ಯಾಪ್ತಿಯ ಬೆಸ್ಕಾಂ ಆದಿಕಾರಿಗಳ ಆಸ್ತಿ ಯನ್ನು ಹರಾಜು ಹಾಕಿ ನೊಂದ ರೈತರಿಗೆ ಪರಿಹಾರ ನೀಡುವ ಕಾನೂನು ಜಾರಿ ಆಗಬೇಕೆಂದು ಸಭೆಯಲ್ಲಿ ನೊಂದ ರೈತರು ಸರ್ಕಾರವನ್ನು ಅಗ್ರಹಿಸಿದರು.
ಗಡಿಭಾಗದ ಕೆ.ಬೈಪಪಲ್ಲಿ ಗ್ರಾಮದ ರೈತ ನಾಗೇಶ್‍ರವರ ಆಲೂಗಡ್ಡೆ ತೋಟದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಕಳಪೆ ಗುಣಮಟ್ಟದ ವಿದ್ಯತ್ ಸರಬರಾಜುನಿಂದ ಬೇಸತ್ತ ರೈತ ನಾಗೇಶ್ ಹಾಗೂ ಧರ್ಮನಾಥ್ ಚುನಾವಣೆ ನೆಪದಲ್ಲಿ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷದಿಂದ ಲಕ್ಷಾಂತರ ಖಾಸಗಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಕೈಗೆ ಬರುವ ಸಮಯದಲ್ಲಿ ವಿದ್ಯುತ್ ಅವ್ಯಸ್ಥತೆಯಿಂದ ಅಮರ್ಪಕವಾಗಿ ನೀರು ಹಾಯಿಸಲಾಗದೆ ಕೈಗೆ ಬಂದ ಬೆಳೆ ಕಣ್ಣ ಮುಂದೆಯೇ ಒಣಗಿ ಪಸಲು ಭೂಮಿಗೆ ಉದುರುವ ಮೂಲಕ ಸಂಪೂರ್ಣವಾಗಿ ಬೆಳೆ ನಾಶದಿಂದ ಹಾಕಿದ ಬಂಡವಾಳದ ಜೊತೆಗೆ ಬರುವ ಲಾಭವನ್ನು ಬೆಸ್ಕಾಂ ಅಧಿಕಾರಿಗಳು ಕಸಿಯುತ್ತಿದ್ದಾರೆಂದು ವಿದ್ಯುತ್ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಶ್ರೀಮಂತರ ಹಾಗೂ ಜನಪ್ರತಿನಿದಿಗಳ ರಾಜಕೀಯ ಕಾರ್ಯಕ್ರಮಗಳಿಗೆ ಯಾವುದೇ ಎಲ್.ಸಿ ಅಡ್ಡ ಬರುವುದಿಲ್ಲ ದಿನದ 24 ಗಂಟೆ ಅವರು ಹೇಳಿದಂತೆ ಕಿ.ಮೀ ಗೊಬ್ಬ ಲೈನ್‍ಮ್ಯಾನ್‍ನ್ನು ನೇಮಕ ಮಾಡಿ ಕಾರ್ಯಕ್ರಮ ಮುಗಿಯುವವರೆಗೂ ರಾಮ ಲಕ್ಷಣರಂತೆ ಅಧಿಕಾರಿಗಳೇ ಜನಪ್ರತಿನಿದಿಗಳ ಕಾರ್ಯಕ್ರಮವನ್ನು ಕಾಯುವ ಇವರಿಗೆ ರೈತರ ದುಡಿಮೆಯ ಬೆಳೆ ಗೊತ್ತಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
24 ಗಂಟೆಯಲ್ಲಿ ಬೇಸಿಗೆ ಮುಗಿಯುವವರೆಗೂ ಗುಣಮಟ್ಟದ 10 ತಾಸು ವಿದ್ಯುತ್ ನೀಡಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕೆಂದು ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿ ಏ.20 ರಂದು ನಷ್ಟ ಬೆಳೆ ಸಮೇತ ಬೆಸ್ಕಾಂ ಇಲಾಖೆ ಕಚೇರಿ ಮುತ್ತಿಗೆ ಹಾಕಲು ತಿರ್ಮಾನಿಸಲಾಗಿದೆ. ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಪ್ರದಾನ ಕಾರ್ಯದರ್ಶಿ ಪಾರುಕ್‍ಪಾಷ, ಬಂಗಾರಿ ಮಂಜು, ಸುನಿಲ್‍ಕುಮಾರ್, ಆದಿಲ್‍ಪಾಷ, ವಿಜಯಪಾಲ್, ಭಾಸ್ಕರ್, ಯಲ್ಲಪ್ಪ, ಹರೀಶ್, ಹೆಬ್ಬಣಿ ಆನಂದರೆಡ್ಡಿ, ಗೀರೀಶ್, ಮುಂತಾದವರಿದ್ದರು.
Leave a Review