ಬೆಂಗಳೂರು: ಉಷಾ ಇಂಟರ್ನ್ಯಾಶನಲ್, ಭಾರತದ ಪ್ರಮುಖ ಹೊಲಿಗೆ ಯಂತ್ರ ಕಂಪನಿಯು ದೇಶದ ಪ್ರಮುಖ ಫ್ಯಾಷನ್ ಸಂಸ್ಥೆ ನಿಪ್ಟ್ – NIFT ಸೇರಿದಂತೆ ದೇಶದ ಪ್ರಮುಖ ಉದಯೋನ್ಮುಖ ಪ್ಯಾಷನ್ ಡಿಸೈನರ್ ಗಳನ್ನು ಗೌರವಿಸುತ್ತಿದೆ.
ಬೆಂಗಳೂರು, ಭುವನೇಶ್ವರ್, ಭೋಪಾಲ್, ಚೆನ್ನೈ, ಗಾಂಧೀನಗರ, ಹೈದ್ರಾಬಾದ್, ಜೋಧ್ ಪುರ್, ಖಾಗ್ರಾ, ಕನ್ನೂರು, ಕೊಲ್ಕತ್ತಾ, ಮುಂಬಯಿ, ನವದೆಹಲಿ, ಪಂಚಕುಲ, ಪಾಟ್ನಾ, ರಾಯ್ ಬರೇಲಿ ಮತ್ತು ಶಿಲ್ಲಾಂಗ್ ಪ್ಯಾಷನ್ಡಿಸೈನರ್ಗಳ ಸೃಜನಶೀಲತೆಯನ್ನು ಇದು ಪ್ರೋತ್ಸಾಹಿಸುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಷಾ ನಿಪ್ಟ್ ಅತ್ಯುತ್ತಮ ಗಾರ್ಮೆಂಟ್ ಕನ್ಸ್ಟ್ರಕ್ಷನ್ ಪ್ರಶಸ್ತಿ -2023 ಅನ್ನು ಬೆಂಗಳೂರಿನ ತತ್ಸತ್ ಗುಪ್ತಾ ಅವರಿಗೆ ಪ್ರದಾನ ಮಾಡಿದರು.
ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಉಪಸ್ಥಿತರಿದ್ದರು. ಈ ಪ್ರಶಸ್ತಿ ಜನೊಮೆ ಅಲ್ಲೂರೆ ಡಿ.ಎಲ್.ಎಕ್ಸ್ ಹೊಲಿಗೆ ಯಂತ್ರ, ಪ್ರಮಾಣ ಪತ್ರ, 10 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಉಷಾ ಸಂಸ್ಥೆ 2000 ದಿಂದಲೂ ಪ್ರಾಯೋಜಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಫ್ಯಾಷನ್ ಹೊಸ ವಿನ್ಯಾಸಗಳ ಸೃಷ್ಟಿಗೆ ಸ್ಫೂರ್ತಿ ನೀಡುವ ಅಭಿವ್ಯಕ್ತಿಯಾಗಿದೆ ಮತ್ತು ಸಂಪ್ರದಾಯಗಳ ಪರಿಸರದಲ್ಲಿ ಕಲೆಗಳ ಸಂಗಮವಾಗಿದೆ. ನಮ್ಮ ಬಟ್ಟೆಗಳು ನಮ್ಮ ಸಂಸ್ಕೃತಿ, ನಮ್ಮ ವ್ಯಕ್ತಿತ್ವದ ಗುರುತು. ಅದರ ಸುಂದರ ನೋಟ ನಮ್ಮ ಸಂಪ್ರದಾಯ, ಸಂಸ್ಕೃತಿಗೆ ಮನ್ನಣೆ ನೀಡಬೇಕೆಂಬುದೇ ನಮ್ಮೆಲ್ಲರ ಪ್ರಯತ್ನವಾಗಬೇಕು.
1986 ರಲ್ಲಿ ಸ್ಥಾಪನೆಯಾದ ಎನ್ ಐಎಫ್ ಟಿ ಪ್ರಸ್ತುತ ದೇಶದಲ್ಲಿ ಫ್ಯಾಷನ್ ಶಿಕ್ಷಣ, ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣೆಯ ಪ್ರಮುಖ ಸಂಸ್ಥೆಯಾಗಿದ್ದು, ದೇಶಾದ್ಯಂತ ಸಾವಿರಾರು ಬ್ರ್ಯಾಂಡ್ ನಾಯಕರು, ಉದ್ಯಮಿಗಳು ಮತ್ತು ವಿನ್ಯಾಸಕರಿಗೆ ಶ್ರೇಷ್ಠತೆಯನ್ನು ಒದಗಿಸುತ್ತದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳ ಅಸಾಧಾರಣ ಕ್ರಿಯಾಶೀಲತೆ ಮತ್ತು ಕೌಶಲ್ಯವನ್ನು ಗುರುತಿಸಿ ಪ್ಯಾಷನ್ ಕೈಗಾರಿಕಾ ವಲಯದಲ್ಲಿ ಪ್ರತಿಭೆಗಳನ್ನು ಶೋಧನೆಗೆ ನಿಪ್ಟ್ ನೆರವಾಗುತ್ತಿದ್ದು, ನಿಪ್ಟ್ ನೊಂದಿಗೆ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಉμÁ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.