ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಹದಿನ್ಯೂಳು ಗ್ರಾಮ ಪಂಚಾಯತಿಗಳಲ್ಲಿ ಪ್ರತಿಷ್ಠಿತ ಗ್ರಾಮ ಪಂಚಾಯತಿ ಎನ್ನಿಸಿರುವ ರಾಮೋಹಳ್ಳಿ ಗ್ರಾಮ ಪಂಚಾಯತಿಗೆ ಭೀಮನಕುಪ್ಪೆಯ ಬಿ ಹೆಚ್ ಪ್ರಭು ರವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ನಂತರ ಮಾತನಾಡಿದ ಅವರು ನನ್ನ ಅಯ್ಕೆಗೆ ಅಹಕರಿಸಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ರಾಮೋಹಳ್ಳಿ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳನ್ನು ಆಧ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲು ಯೋಜನೆಯನ್ನು ಹೊಂದಲಾಗಿದೆ.
ಶಾಸಕರ ಅನುದಾನವನ್ನು ಬಳಸಿಕೊಂಡು ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರು ಒಳಚರಂಡಿ ಬೀದಿದೀಪ ಸ್ಮಶಾನ ಹಾಗು ಇನ್ನಿತರ ನಾಗರೀಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸಮಗ್ರವಾಗಿ ಅಭಿವೃದ್ಧಿ ಹೊಂದುವಂತೆ ಮಾಡಲು ಅವಕಾಶ ಕಲ್ಪಿಸಿದ ಪಂಚಾಯತಿ ಸದಸ್ಯರಿಗೂ ಶಾಸಕರಿಗು ಕೃತಜ್ಞತೆಯನ್ನು ಸಲ್ಲಿಸಿದರು.
ಇದೇ ಸಮಯದಲ್ಲಿ ಹಲವಾರು ದಿನಗಳ ಬಹು ಬೇಡಿಕೆಯಾದ ಅಶ್ರಯ ನಿವೇಶನವನ್ನು ಕಲ್ಪಸಿಕೂಡುವುದು ಮಹತ್ವವಾದ ಕೆಲಸವನ್ನು ನನ್ನ ಅಧಿಕಾರದ ಅವಧಿಯಲ್ಲಿ ಪೂರೈಸಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್ ಟಿ ಸೋಮಶೇಖರ್ ಅವರ ಪುತ್ರ ನಿಶಾಂತ್ ಸೋಮಶೇಖರ್ ಹಾಗು ನಿಕಟಪೂರ್ವ ರಾಮೋಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಸುಶೀಲಾ ಬಿ ಎಲ್ ನಾಗರಾಜ್ ಸದಸ್ಯರಾದ ಉಮೇಶ್ ಸೇರಿದಂತೆ ಕುಂಬಳಗೂಡು ಗ್ರಾಮ ಪಂಚಾಯತಿ ಅದ್ಯಕ್ಷ ರಾಮಕೃಷ್ಣ( ಮಣ್ಣಿನಮಗ) ಮಾಜಿ ಅಧ್ಯಕ್ಷ ಚಿಕ್ಕರಾಜು ಸೂಲಿಕೆರೆ ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಕುಮಾರ್ ಸೇರಿದಂತೆ ಹಲವಾರು ಮುಖಂಡರು ಅಭಿನಂದಿಸಿದರು.