ಮೈಸೂರು : ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಸೆ.೨೪ ರಂದು ನಿಧನರಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದAತೆ ಅಂತ್ಯಕ್ರಿಯೆ ನಡೆಯಿತು. ಹಿರಿಯ ಸಾಹಿತಿಗಳಿಗೆ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದೆ.
ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದAತೆ ಎಸ್.ಎಲ್. ಭೈರಪ್ಪ ಅವರ ಪುತ್ರ ಪುತ್ರ ರವಿಶಂಕರ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಷ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಅಂತಿಮ ದರ್ಶನ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ತಂದು ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತದೇಹವನ್ನ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇರಿಸಲಾಯಿತು. ಇಂದು ಬೆಳಗ್ಗೆ ೮ ಗಂಟೆಗೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮನೆಯ ಬಳಿಯೂ ಕೆಲಹೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂತ್ಯಕ್ರಿಯೆಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ತೇಜಸ್ವನಿ ಅನಂತ್ಕುಮಾರ್, ಮೈಸೂರಿನ ಜಿಲ್ಲಾಧಿಕಾರಿ ಲಕ್ಷಿö್ಮÃಕಾಂತ್ ರೆಡ್ಡಿ, ಸೇರಿದಂತೆ ಹಲವು ಸಚಿವರು, ಶಾಸಕರು, ಸ್ಥಳೀಯ ಬಿಜೆಪಿ ಮುಖಂಡರು, ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದರು.
ಪ್ಯಾನ್ ಇಂಡಿಯಾ ನಾವಲಿಸ್ಟ್ ಭೈರಪ್ಪ ಈ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಬರವಣಿಗೆಯ ಮೂಲಕವೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದ ೯೪ ವರ್ಷದ ಸಾಹಿತಿ ಮೊನ್ನೆ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದರು. ಇವರ ಸಾವಿಗೆ ಇಡೀ ಕರುನಾಡೇ ಮರುಕ ಪಟ್ಟಿದೆ.