ಚಿಕ್ಕಬಳ್ಳಾಪುರ ಸೆ.೧೨: ವಿಶ್ವವಿಖ್ಯಾತ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ರವರ ೧೬೪ನೇ ಹುಟ್ಟುಹಬ್ಬ ಸೆಪ್ಟೆಂಬರ್ ೧೫ ಆಗಿದ್ದು, ರಾಜ್ಯವು ಸೇರಿದಂತೆ ರಾಷ್ಟç ಮತ್ತು ಅಂತರ ರಾಷ್ಟಿçÃಯವಾಗಿ ಕೋಟ್ಯಾಂತರ ಮಂದಿ ಸರ್.ಎಂ.ವಿ.ರವರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಆಚರಿಸವು ಹಿನ್ನೆಲೆಯಲ್ಲಿ ಸರ್.ಎಂ.ವಿ. ರವರ ಜೀವನ ಹಾಗೂ ಅವರು ನಡೆದುಬಂದ ಸಾಧನೆಯ ಒಂದು ಕಿರುಪರಿಚಯ ಇದಾಗಿದೆ.
ವಿಶ್ವದಲ್ಲಿ ಅಖಂಡ ಕೋಲಾರ ಜಿಲ್ಲೆ ಹತ್ತು ಹಲುವು ವೈಶಿಷ್ಟö್ಯಗಳನ್ನು ಹೊಂದಿದ್ದು ಮುಖ್ಯವಾಗಿ ಕೋಲಾರದ ಚಿನ್ನದ ಗಣಿ, ವಿಶ್ವಪ್ರಸಿದ್ದ ನಂದಿ ಗಿರಿಧಾಮ, ಸ್ವಾತಂತ್ರö್ಯ ಹೋರಾಟದ ಹೆಗ್ಗುರುತು ವಿದುರಾಶ್ವತ್ಥ ಹಾಗೂ ವಿಶ್ವಕ್ಕೆ ಮಾದರಿಯಾದ ಕೃಷಿ ಒಳಗೊಂಡAತೆ ಹತ್ತು ಹಲವು ವೈಶಿಷ್ಟö್ಯಗಳನ್ನು ಹೊಂದಿರುವ ಹಿಂದಿನ ಕೋಲಾರ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯೆಂ ಕುಗ್ರಾಮದಲ್ಲಿ ಬ್ರಾಹ್ಮಣ ಮನೆತನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ರವರು ೧೮೬೧ ರಲ್ಲಿ ಜನಿಸಿದರು.
ವಿಶ್ವೇಶ್ವರಯ್ಯನವರ ತಂದೆ ‘ಶ್ರೀನಿವಾಸ ಶಾಸ್ತ್ರಿ’, ತಾಯಿ ‘ವೆಂಕಟಲಕ್ಷ್ಮಮ್ಮ’. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ ‘ಮೋಕ್ಷಗುಂಡA’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡA ಸೇರಿಕೊಂಡಿದೆ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿದ್ದಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿAಗ್ ಪದವಿಯನ್ನು ಪಡೆದರು.
ಭಾರತರತ್ನ ಸರ್.ಎಂ.ವಿ ರವರ ಜೀವನದಲ್ಲಿ ಅವರ ಯಶಸ್ಸಿಗೆ ಬೆಂಬಲ ನೀಡಿದ್ದೆ ಅಲ್ಲದೆ ಮೈಸೂರು ರಾಜ್ಯ ಹತ್ತು ಹಲವು ಆಯಾಮಗಳಿಂದ ಜಗತ್ತಿನಲಿಯೇ ವಿಖ್ಯಾತ ಗೊಳ್ಳಲು ಕಾರಣರಾದವರು ರಾಜ್ಯಕ್ಕೆ ಬೆಳಕು ತಂದ ರಾಜ್ಯದ ಬೆಳವಣಿಗೆಯ ಹರಿಕಾರರಾದ ರಾಜಋಷಿ ನಾಲ್ವಡಿ ಕೃಷ್ಣರಾಜಯ ಒಡೆಂiÀiರ್ ಎಂಬುದು ರಾಜ್ಯದ ಜನತೆ ಎಂದೆAದಿಗೂ ಮರೆಯುವಂತಿಲ್ಲ. ನಾಲ್ವಡಿ ಕೃಷ್ಣರಾಜಯ ಒಡೆಂiÀiರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ರವರ ಪರಸ್ಪರ ಮನೋ ಹೊಂದಾಣಿಕೆ ಮತ್ತು ನಂಬಿಕೆ ಪರಸ್ಪರ ವಿಶ್ವಾಸ ಈ ಕಾರಣಗಳಿಂದ ಮೈಸೂರು ರಾಜ್ಯ ಅಭಿವೃದ್ದಿ ಹೊಂದಿತು.ಹೀಗಾಗಿ ಈ ಇಬ್ಬರು ಮಹನೀಯರುಗಳನ್ನು ನವಕರ್ನಾಟಕ ಶಿಲ್ಪಿ ಎನ್ನಲಾಗಿದೆ
ಸರ್.ಎಂ.ವಿ ರವರ ಶೈಕ್ಷಣಿಕ ವಿದ್ಯಾಬ್ಯಾಸದ ನಂತರ ವೃತ್ತಿ ಜೀವನದಲ್ಲಿ ೧೮೮೪ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಇದಾದ ನಂತರ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು.
ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ ವೂಂದನ್ನು ಕಂಡು ಹಿಡಿದು ಅದಕ್ಕಾಗಿ ‘ಪೇಟೆಂಟ್’ ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ ‘ಖಡಕ್ವಾಸ್ಲಾ’ ಅಣೆಕಟ್ಟಿನಲ್ಲಿ ಸ್ಥಾಪಿತವಾದವು.
‘ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು’ ಮತ್ತು ಕರ್ನಾಟಕದ ‘ಕೃಷ್ಣರಾಜಸಾಗರ’ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದ ಕಾರ್ಯವೈಖರಿ ಮತ್ತು ಅಪಾರ ಬುದ್ದಿವಂತಿಕೆ ಕಾರಣವಾಯಿತು.
೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿAಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿAಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.
ಹಿಂದಿನ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್.ಎಂ.ವಿ.ರವರ ಹುಟ್ಟಿನ ಕಾರಣದಿಂದಾಗಿ ವಿಶೇಷ ಗೌರವ ಪ್ರಾಪ್ತವಾಗಿದೆ. ೧೯೫೫ರಲ್ಲಿ ಅಂದಿನ ಭಾರತದ ಪ್ರದಾನಿ ಜವಹರಲಾಲ್ ನೆಹರು ಹಾಗೂ ಅಂದಿನ ರಾಷ್ಟçಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ರವರಿಂದ ಸರ್.ಎಂ.ವಿ. ರವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಇದು ಈ ರಾಜ್ಯಕ್ಕೆ ಮತ್ತು ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂದ ಗೌರವವಾಗಿದೆ. ಇಲ್ಲಿ ಸ್ಮರಿಸಬಹುದಾದ ಮತ್ತೊಂದು ವಿಷಯ ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿಯಲ್ಲಿ ಜನಿಸಿದ ಮತ್ತೊಬ್ಬ ಕನ್ನಡಿಗ ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್ ರವರು ಭಾರತ ರತ್ನ ಪ್ರಶಸ್ತಿ ಪಡೆದ ಎರಡನೇ ಕನ್ನಡಿಗರಾಗಿದ್ದಾರೆ, ಇದು ಸಹ ಜಿಲ್ಲೆಗೆ ಹೆಮ್ಮೆ ತರುವ ವಿಷಯ.
ಜಗತ್ತಿನಲ್ಲಿ ಮೊದಲ ಬಾರಿಗೆ ಕೈಗಾರಿಕೆಕರಣ ಇಲ್ಲವೇ ಸರ್ವನಾಶ ಎಂಬ ಮಂತ್ರವನ್ನು ಜಗತ್ತಿಗೆ ನೀಡಿ ಕೈಗಾರಿಕೆಗಳ ಸ್ಥಾಪನೆಯಿಂದ ದೇಶದ ಅಭ್ಯುದಯ ಸಾಧ್ಯ ಎಂದು ಹೇಳಿದ ದಾರ್ಶನಿಕರು ಸರ್.ಎಂ.ವಿ ರವರು ಇವರ ಇಚ್ಛಾಶಕ್ತಿ ಕಾರಣ ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ ನಡೆದು ಅದರ ಫಲ ಲಕ್ಷೆÆÃಪಲಕ್ಷ ಮಂದಿ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಇದು ಸೂರ್ಯನಷ್ಟೇ ಸತ್ಯ.