ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವೈಭವದಿಂದ ನಡೆದ ತೆಪ್ಪೋತ್ಸವ ಕಾರ್ಯಕ್ರಮ.
ಶ್ರೀ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೊತ್ಸವ ಮುಗಿದ ಒಂದು ತಿಂಗಳಿಗೆ ಬರುವ ಮಾಘ ಶುದ್ಧ ಪಂಚಮಿಯಂದು ನಡೆಯುವ ಈ ತೆಪ್ಪೋತ್ಸವ ಕಾರ್ಯಕ್ರಮ ದೇವಸ್ಥಾನ ಸಮೀಪದ ಕಲ್ಯಾಣಿಯ ಸುತ್ತಾ ಸುಂದರವಾದ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಗೆ ವೇದ, ಮಂತ್ರ ಘೋಷಗಳಿಂದ ಪೂಜೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ನಡೆದ ಭರತನಾಟ್ಯವು ನೋಡುಗರ ಕಣ್ಮನ ಸೆಳೆಯಿತು.ತೆಪ್ಪದ ಮೇಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನ ಇಟ್ಟು ಭವ್ಯ ಮೆರವಣಿಗೆಯ ಮೂಲಕ ಮಂಗಳವಾದ್ಯಗಳೊಂದಿಗೆ ತೆಪ್ಪೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.ಈ ವೇಳೆ ದೇವಸ್ಥಾನದ ಕಾರ್ಯ ನಿರ್ವಾಹಕಾಧಿಕಾರಿ ನಾಗರಾಜ್, ಅರ್ಚಕರು ಸೇರಿದಂತೆ ಭಕ್ತಮಂಡಲಿ ಉಪಸ್ಥಿತರಿದ್ದರು.