ಬೆಂಗಳೂರು: ವಿಬ್ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ನ ಆದರ್ಶಪ್ರಾಯ ವಿದ್ಯಾರ್ಥಿ ಭಾರ್ಗವ ಮಲ್ಲುವಝುಲ ಬೆಂಗಳೂರಿನ ಅನಾಥ ಮಕ್ಕಳ ಜೀವನದಲ್ಲಿ ಖುಷಿ ಮತ್ತು ಭರವಸೆಯನ್ನು ತುಂಬಲು ಒಂದು ಮಹತ್ವದ ಪಯಣವನ್ನು ಆರಂಭಿಸಿದ್ದಾರೆ. ಅವರು ಅನಾಥ ಮಕ್ಕಳ ರಕ್ಷಣೆಗಾಗಿ 2023 ಆಗಸ್ಟ್ನಲ್ಲಿ ದಿ ಆರೋಗಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.
ಭಾರ್ಗವ ಪ್ರಸ್ತುತ ಬೆಂಗಳೂರಿನ ಹೊರಮಾವಿನಲ್ಲಿರುವ ವಿಬ್ಗಯಾರ್ ಹೈಯಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದು, ಅನಾಥ ಮಕ್ಕಳ ಜನ್ಮದಿನವನ್ನು ಆಚರಣೆ ಮಾಡುವುದು ಮತ್ತು ಅವರಿಗೆ ಬೇಕಾಗಿರುವ ಬೆಚ್ಚನೆಯ ಮತ್ತು ಖುಷಿಯ ಭಾವವನ್ನು ಮೂಡಿಸುವ ಗುರಿಯನ್ನು ಹಾಕಿಕೊಂಡು ಆರೋಗಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.
ಆರೋಗಿ ಫೌಂಡೇಶನ್ ಯಶಸ್ವಿಯಾಗಿ 35 ಜನ್ಮದಿನಗಳನ್ನು ಆಚರಿಸಿದೆ. ಬೆಂಗಳೂರಿನಲ್ಲಿ ಕಳೆದ 6 ತಿಂಗಳುಗಳಲ್ಲಿ ವಿವಿಧ ಅನಾಥಾಶ್ರಮಗಳಲ್ಲಿನ 150 ಕ್ಕೂ ಹೆಚ್ಚು ಮಕ್ಕಳ ಮುಖದಲ್ಲಿ ನಗುವನ್ನು ಹೊಮ್ಮಿಸಿದೆ.ಭಾರ್ಗವ್ ಅವರ ಪ್ರಯತ್ನಕ್ಕೆ ವಿಬ್ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ನ ಉಪಾಧ್ಯಕ್ಷ ಕವಿತಾ ಕೆರವಲ್ಲ ಮೆಚ್ಚುಗೆ ಸೂಚಿಸಿದ್ದು, ವಿಬ್ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ನಲ್ಲಿ ನಾವು ನಮ್ಮ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ತಾದಾತ್ಮ್ಯದ ಭಾವವನ್ನು ಮೂಡಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಭಾರ್ಗವ್ ಮಲ್ಲುವಝು, ವಿಬ್ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ ತಾದಾತ್ಮ್ಯ ಮತ್ತು ಸಮುದಾಯ ಸೇವೆಯ ಪ್ರಾಮುಖ್ಯತೆಯನ್ನು ನನಗೆ ಹೇಳಿಕೊಟ್ಟಿದೆ. ಸಮುದಾಯಕ್ಕೆ ಮರಳಿ ಕೊಡುಗೆ ನೀಡಲು ಮತ್ತು ಅವಕಾಶವಂಚಿತರ ಜೀವನದಲ್ಲಿ ಅರ್ಥವತ್ತಾದ ಬದಲಾವಣೆಯನ್ನು ಮಾಡಲು ಆರೋಗಿ ಫೌಂಡೇಶನ್ ಒಂದು ಅವಕಾಶವಾಗಿದೆ.