ಬೇಲೂರು: ಬೇಲೂರು ತಾಲೂಕಿನ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಭೀಮ ಕೊರೇ ಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಎರಡನೇ ವರ್ಷದ ಭೀಮ ಕೋರೆ ಗಾಂವ್ ವಿಜಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಬೇಲೂರು ನಗರದ ತಹಸೀಲ್ದಾರ್ ಕಚೇರಿಯ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿವಿಧ ಜಾನಪದ ಕಲಾ ತಂಡಗಳಾದ ವೀರಗಾಸೆ ಕುಣಿತ ನಾಸಿಕ್ ಡೋಲು ರೋಡ್ ಆರ್ಕೆಸ್ಟ್ರಾ ಹಾಗೂ ಡಿಜೆ ಸೌಂಡ್ ಮೂಲಕ ಮೆರವಣಿಗೆ ಹೊರಟ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಜೈ ಭೀಮ್ ಘೋಷಣೆಯೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು.
ಮಧ್ಯಾಹ್ನ 2:30ಕ್ಕೆ ಪ್ರಾರಂಭವಾದ ಮೆರವಣಿಗೆ ರಾತ್ರಿ 8:30 ರ ಸಮಯಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿನ ಮೂಡಿಗೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನದ ಗೌರವ ಸಲ್ಲಿಸಿದ ನಂತರ ಜೂನಿಯರ್ ಕಾಲೇಜ್ ಮೈದಾನ ತಲುಪಿತು. ಪಕ್ಷ ಬೇದ ಮರೆತು ನಡೆದ ಭೀಮ ಕೋರೆಗಾವ್ ವಿಜಯೋತ್ಸವಕ್ಕೆ ತಾಲೂಕಿನ ಪ್ರತಿ ಹಳ್ಳಿಯಿಂದಲೂ ಆಗಮಿಸಿದ್ದ ಕಾರ್ಯಕರ್ತರ ಮೊಗದಲ್ಲಿ ಸ್ವಾಭಿಮಾನ ಸಮಾನತೆ ಹಾಗೂ ಹೋರಾಟದ ಪ್ರತಿರೂಪ ಕಾಣುತ್ತಿತ್ತು.
ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಹಾ.ರಾ.ಮಹೇಶ್,ಇತಿಹಾಸ ಪುಟಗಳಿಂದ ಕಳೆದು ಹೋಗಿರುವ ಭೀಮ ಕೋರೆ ಗಾಂವ್ ಯುದ್ಧದ ಗೆಲುವು ದೇಶದ ಮೂಲ ನಿವಾಸಿ ಹಾಗೂ ಶೋಷಿತರ ಪಾಲಿಗೆ ಸ್ವಾಭಿಮಾನದ ಸಂಕೇತವಾಗಿದೆ. ಶತಶತಮಾನಗಳಿಂದ ಶಿಕ್ಷಣ ಸಮಾನತೆ ಅಧಿಕಾರ ಇಲ್ಲದೆ ನೂರಾರು ವರ್ಷಗಳಿಂದ ಗುಲಾಮಗಿರಿ ಜೀವನ ಸಾಗಿಸುತ್ತಿದ್ದ ಶೋಷಿತರಿಗೆ ಕೊರೇ ಗಾಂವ್ ವಿಜಯೋತ್ಸವ ಹೊಸ ಜೀವನ ತಂದುಕೊಟ್ಟಿದೆ.
28 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಕೇವಲ ಐದುನೂರು ಜನ ಮಹಾರ್ ಸೈನಿಕರು ಯುದ್ಧ ಮಾಡಿದ ಪರಿಣಾಮವಾಗಿ ನಾವುಗಳು ಸಮಾನವಾದ ಹಕ್ಕುಗಳನ್ನು ಪಡೆಯಲು ಕಾರಣವಾಗಿದೆ ಎಂದರು.ಕಾರ್ಯಕ್ರಮದಲ್ಲಿಶಾಸಕ ಎಚ್.ಕೆ.ಸುರೇಶ್, ದಸಂಸ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್, ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್, ಮಾಜಿ ತಾ ಪಂ ಸದಸ್ಯರಾದ ಪರ್ವತಯ್ಯ, ದಲಿತ ಮುಖಂಡ ಎಂ.ಜಿ ವೆಂಕಟೇಶ್. ಮತ್ತು ಶಶಿಧರ್ ಮೌರ್ಯ .ಮಂಜುನಾಥ್ ಚಿಕ್ಕ ಬ್ಯಾಡಿಗೆರೆ, ಎಂ ಜಿ ನಿಂಗರಾಜ್, ದಸಂಸ ಜಿಲ್ಲಾ ಸಂಚಾಲಕ ಬಿ.ಎಲ್.ಲಕ್ಷ್ಮಣ್. ವಕೀಲ ರಾಜು ಅರೇಹಳ್ಳಿ. ರಘು ನಾರಾಯಣಪುರ. ಅಶೋಕ್ ಕೋಟಿಗನಹಳ್ಳಿ. ರವಿ ರಾಯಪುರ. ಹರೀಶ್. TAPMC ಸದಸ್ಯ ತೀರ್ಥಕುಮಾರ್ ಮೇಕೆದಾಟು. ರಘು ಶೆಟ್ಟಿ ಗೆರೆ. ರಂಗಸ್ವಾಮಿ. ಬಸವಪುರ ರವಿ. ರಾಮೇನಹಳ್ಳಿ ವೆಂಕಟೇಶ್. ಗೋವಿನಹಳ್ಳಿ ರವಿ.ಇಂಜಿನಿಯರ್ ಕೀರ್ತಿ, ಸುನೀಲ್ ಭೀಮ್ ಅರ್ಮಿ ಇತರರು ಹಾಜರಿದ್ದರು.