ಮೂಡುಬಿದಿರೆ (ದಕ್ಷಿಣ ಕನ್ನಡ): ಮೊದಲ ದಿನ ವೇಗದ ಓಟಗಾರ್ತಿಯಾಗಿ ಗಮನ ಸೆಳೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ನ ಭೂಮಿಕಾ ಅವರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದ ಸ್ಪ್ರಿಂಟ್ನಲ್ಲಿ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದರು.
ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಕೂಟದ ಎರಡನೇ ದಿನವಾದ ಬುಧವಾರ ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಭೂಮಿಕಾ 4×400 ಮೀ ರಿಲೆಯಲ್ಲೂ ಆತಿಥೇಯರಿಗೆ ಚಿನ್ನ ತಂದುಕೊಟ್ಟರು.
200 ಮೀಟರ್ಸ್ ಓಟದಲ್ಲಿ ತಮ್ಮದೇ ಸಂಸ್ಥೆಯ ದುರ್ಗಾ ಅವರನ್ನು 2 ಸೆಕೆಂಡುಗಳ ಅಂತರದಲ್ಲಿ ಭೂಮಿಕಾ ಹಿಂದಿಕ್ಕಿದರು. ಈ ಸ್ಪರ್ಧೆಯ ಎಲ್ಲ ಪದಕಗಳು ಆಳ್ವಾಸ್ ಪಾಲಾದವು. ಪುರುಷ ಮತ್ತು ಮಹಿಳೆಯರ ರಿಲೆಯಲ್ಲೂ ಆಳ್ವಾಸ್ ಚಿನ್ನ ಗಳಿಸಿತು.