ರಾಮನಗರ: ಹಣ ದುರುಪಯೋಗದ ಆರೋಪ ಹಿನ್ನೆಲೆಯಲ್ಲಿ ಬಿಡದಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಂಕರ್ ನಾಯಕ್ ಅವರನ್ನ ಅಮಾನತು ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅವರು ಅಮಾನತ್ತು ಮಾಡಿದ್ದಾರೆ.
ಹಣ ದುರುಪಯೋಗ ಆರೋಪದ ಮೇಲೆ ಬೆಂಗಳೂರಿನ ಬ್ಯಾಟರಾಯನಪುರ ಪೊಲಿಸ್ ಠಾಣೆಯಲ್ಲಿ ಶಂಕರ್ ನಾಯಕ್ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಪ್ರಸ್ತುತ ಬಿಡದಿ ಪೊಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಶಂಕರ್ ನಾಯಕ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಂಕರ್ ನಾಯಕ್ ವಿರುದ್ಧ ಎಫ್ ಐ ಆರ್ ದಾಖಲಾಗ್ತಿದ್ದಂತೆ ಕೋರ್ಟ್ ಮೊರೆ ಹೋಗಿ ಅಲ್ಲಿಂದ ಎಫ್.ಐ ಆರ್ ಗೆ ತಡೆಯಾಜ್ಞೆ ತರಲಾಗಿತ್ತು.
ಇಲಾಖೆ ತನಿಖೆ ನಡೆಸಿ ಆರೋಪ ಸಾಬೀತು ಹಿನ್ನಲೆ ಇನ್ಸ್ ಪೆಕ್ಟರ್ ಅಮಾನತ್ತು ಮಾಡಲಾಗಿದೆ. ಇದಲ್ಲದೆ ಇನ್ನೂ ಎರಡು ಪ್ರಕರಣಗಳು ಇದೇ ಶಂಕರ್ ನಾಯಕ್ ವಿರುದ್ಧ ದಾಖಲಾಗಿದ್ದವು. ಕೆಂಗೇರಿ ವಿಭಾಗದ ಎಸಿಪಿ ಶಂಕರ್ ನಾಯಕ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ದಯಾನಂದ್ ಅವರು ಆಲೋಕ್ ಮೋಹನ್ ಹಾಗೂ ಐಜಿಪಿ ರವಿಕಾಂತೇಗೌಡ ಅವರಿಗೆ ಶಂಕರ್ ನಾಯಕ್ ಅವರನ್ನ ಅಮಾನತ್ತು ಮಾಡಿ ಎಂದು ವರದಿ ನೀಡಿದ್ದರು.
ಇದೇ ವಿಚಾರವಾಗಿ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಈ ಹಿಂದೆ ಬ್ಯಾಟರಾಯನಪುರ ಪೊಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಶಂಕರ್ ನಾಯಕ್ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 201,409,110, 465 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಇಲಾಖೆ ತನಿಖೆ ನಡೆಸಿ ಅಮಾನತ್ತು ಮಾಡಲಾಗಿದೆ.