ರಾಮನಗರ: ಬಿಡದಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಮಾಜಿ ಶಾಸಕ ಎ.ಮಂಜುನಾಥ್ ಅವರ ನೇತೃತ್ವದಲ್ಲಿ ಜೆಡಿಎಸ್- ಬಿಜೆಪಿ ಎನ್ಡಿಎ ಮೈತ್ರಿ ಕೂಟದ ಬೆಂಬಲಿತ ಅಭ್ಯರ್ಥಿಗಳು ಬಿರುಸಿನಿಂದ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಶುಭ ಶುಕ್ರವಾರ ಎಂದು ನಂಬಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ನಾಮಪತ್ರಗಳ ಸಲ್ಲಿಕೆ ಕಾರ್ಯದಲ್ಲಿ ನಿರತರಾಗಿದ್ದರು. ನಾಮಪತ್ರ ಸಲ್ಲಿಕೆ ನಂತರ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಶಾಸಕರಾದ ದಿವಂಗತ ಸಿ.ಬೋರಯ್ಯ ನವರು. ಬ್ಯಾಟಪ್ಪ, ಶರ್ವಣ್ಣ ಅವರುಗಳ ಪರಿಶ್ರಮದಲ್ಲಿ ಬಿಡದಿ ರೈತರ ವಿವಿ ದ್ದೋದ್ದೇಶ ಸಹಹಾರ ಸಂಘವು ಪ್ರಗತಿಯಲ್ಲಿ ನಡೆದುಕೊಂಡು ಬಂದಿದೆ ಎಂದರು.
ನಾನು ಶಾಸಕನಾಗಿದ್ದಾಗ ಸೊಸೈಟಿಯನ್ನು ಬಿಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ತಂದು ಹೆಚ್ಚಿನ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿದೆ. ಆಡಳಿತ ಮಂಡಳಿಯ ಚುನಾವಣೆ ಒಂದು ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ಕೆಲವು ರಾಜಕೀಯ ಒತ್ತಡದ ಕಾರಣ ಚುನಾವಣೆ ತಡವಾಗಿ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಷೇರುದಾರ ಮತದಾರರು ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತ ದಿಂದ ಗೆಲ್ಲಿಸುತ್ತಾರೆ ಎಂಬ ಭರವಸೆ ಮತ್ತು ವಿಶ್ವಾಸ ನನಗಿದೆ ಎಂದರು.
ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಸ್ಪರ್ದಿಸಲು ಎನ್ಡಿಎ ಮೈತ್ರಿಕೂಟದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆಕಾಂಕ್ಷಿತರನ್ನು ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದೇವೆ. ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಸಿಗುವುದರಿಂದ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಕೆಲಸವನ್ನು ಎರಡು ಪಕ್ಷಗಳ ಮುಖಂಡರು ಸೇರಿ ನಾಮಪತ್ರ ಹಿಂಪಡೆಯುವ ದಿನದಂದು ಮಾಡುತ್ತೇವೆ. ಬಿಜೆಪಿ – ಜೆಡಿಎಸ್ ನಾಯಕರು ಮೈತ್ರಿ ಕುರಿತು ಮಾತನಾಡಿ ಒಂಡAಬAಡಿಕೆ ಮಾಡಿಕೊಂಡಿದ್ದೇವೆ. ಪ್ರಾಂತ್ಯ ಮತ್ತು ಜಾತಿವಾರು ಅವಕಾಶ ನೀಡುವ ಜೊತೆಗೆ ಹೊಸ ಮುಖ ಯುವಕರಿಗೆ ಅವಕಾಶ ನೀಡಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ಅಂತಿಮವಾಗಿಸುವ ಕೆಲಸ ಮಾಡಲಿದ್ದೇವೆ ಎದರು.
ಹಿರಿಯ ಮುಖಂಡರಾದ ಹೆಚ್.ಎಲ್.ಚಂದ್ರು, ಚಿಕ್ಕಣ್ಣಯ್ಯ, ಶೇಷಪ್ಪ, ಸೋಮೇಗೌಡ ಸೇರಿದಂತೆ ಪ್ರಮುಖರ ಮಾರ್ಗದರ್ಶನದಲ್ಲಿ ಸಂಘದ ಚುನಾವಣೆ ಎದುರಿಸಲಿದ್ದು, 12 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಲ್ಲ ಸದಸ್ಯರು ಮೈತ್ರಿ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲಲಿದ್ದಾರೆ. ಸೊಸೈಟಿಗೆ ಹೊಸ ಕಟ್ಟಡ, ಗೋದಾಮು, ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಬೇಕು. ಇವುಗಳು ಸಾಕಾರವಾಗಬೇಕಾದರೆ ಸಹಕಾರಿಗಳು ಮೈತ್ರಿ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತು ಮತ ನೀಡಿ ಆಯ್ಕೆ ಮಾಡುವ ಕೆಲಸ ಮಾಡುವಂತೆ ಮನವಿ ಮಾಡಿದರು.
ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾಗಿ ಟಿ.ಕುಮಾರ್, ಪ್ರಸನ್ನಕುಮಾರ್, ಕನ್ನಡ ಮಂಜು, ಲೋಕೇಶ್, ಮಂಜುನಾಥ್, ರವಿಕುಮಾರ್, ಚಿಕ್ಕದೊಡ್ಡಯ್ಯ, ಗುರುಮಲ್ಲೇಶಯ್ಯ, ಬಿ.ಪಿ.ರಾಮು, ಡಿ.ನಿತ್ಯಾನಂದ, ಸವಿತಾ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಸದಸ್ಯರಾದ ಹೆಚ್.ಎಸ್.ಲೋಹಿತ್ ಕುಮಾರ್, ಸೋಮಶೇಖರ್, ಹರೀಶ್ ಕುಮಾರ್, ರಮೇಶ್, ಮಾಜಿ ಸದಸ್ಯ ಕುಮಾರ್, ಮುಖಂಡರಾದ ಹೆಚ್.ಎಲ್.ಚಂದ್ರು, ಚಿಕ್ಕಣ್ಣಯ್ಯ, ಡಾ.ಭರತ್ಕೆಂಪಣ್ಣ, ಲಕ್ಷ್ಮೀನಾರಾಯಣ್, ನರಸಿಂಹಯ್ಯ, ಆನಂದ್, ಜಗದೀಶ್, ಶೇಷಪ್ಪ, ಮಂಜುನಾಥ್, ಪಾಪಣ್ಣ, ರಾಮಣ್ಣ, ರಮೇಶ್ ಬಿಜೆಪಿ ಮುಖಂಡ ರಾದ ರವೀಶ್, ಬಾಳೆಮಂಡಿಶಿವಣ್ಣ, ನೇತ್ರಾವತಿ, ಶಿವನಂಜಯ್ಯ ಮತ್ತಿತರರು ಇದ್ದರು.
ಬಿಡದಿ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ: ನಾಮ ಪತ್ರಗಳ ಭರಾಟೆ



