ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದಂಥ ಕೋಟಿ, ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುಂಬೈ, ದುಬೈನಂತ ಪ್ರದೇಶಗಳಲ್ಲಿ ಫ್ಯಾನ್ಸ್ ಕಡೆ ಕೈ ಬೀಸುತ್ತಾ ಓಡಾಡುತ್ತಿದ್ದಾರೆ. ಯಾವ ಡೈರೆಕ್ಟರ್ ಜೊತೆ ಸಿನಿಮಾ ಮಾಡುತ್ತಾರೆ ಎಂಬುವುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದರ ನಡುವೆಯೇ ಏಪ್ರಿಲ್ನಲ್ಲಿ ರಾಖಿ ಭಾಯ್ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ರಿವೀಲ್ ಮಾಡಲಿದ್ದಾರಂತೆ.
ಈ ಹಿಂದೆ ಕಬ್ಜ ಮೂವಿ ಮಾಡುತ್ತಿರುವ ಆರ್.ಚಂದ್ರು ಜೊತೆ ಯಶ್ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತಾದರೂ ಇದು ಸುಳ್ಳು ಎಂದು ಗೊತ್ತಾಗಿದೆ. ಈಗಾಗಲೇ ಹಲವಾರು ಸ್ಕ್ರೀಫ್ಟ್ಗಳನ್ನು ಯಶ್ ಕೇಳಿದ್ದಾರೆ. ಆದರೆ ಇಂತಹುದೇ ಸಿನಿಮಾ ಮಾಡ್ತೀನಿ ಎಂದು ಯಾವ ಡೈರೆಕ್ಟರ್ಗೂ ಕಾಲ್ಶೀಟ್ ಕೊಟ್ಟಿಲ್ವಂತೆ. ಮುಂದಿನ ತಿಂಗಳು ಅಂದರೆ ಏಪ್ರಿಲ್ನಲ್ಲಿ ತಮ್ಮ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಆ ಪ್ರಾಜೆಕ್ಟ್ಲ್ಲಿ ಕೆಲಸ ಮಾಡಲಾಗುತ್ತದೆ ಅನ್ನೋದ್ರ ಬಗ್ಗೆ ಯಶ್ ಮಾಹಿತಿ ಕೊಡಲಿದ್ದಾರೆ. ಅಲ್ಲಿಯವರೆಗೆ ಫ್ಯಾನ್ಸ್ ಕಾಯಬೇಕಾಗಿದೆ.
ತೆಲುಗು RRR ಖ್ಯಾತಿಯ ನಟ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿರುವ ನಿರ್ಮಾಪಕ ನರ್ಥನ್ಗೆ ಕಾಲ್ಶೀಟ್ ಕೊಟ್ಟಿದ್ದಾರೆ. ನಂತರ KVN ಪ್ರೊಡೆಕ್ಷನ್ನ NK ಲೋಹಿತ್ ಅವರ ಜೊತೆ ಯಶ್ ಅವರ ಫೋಟೋ ವೈರಲ್ ಆಗಿತ್ತು. ಇದರಿಂದ ಅವರ ಜೊತೆಗೂಡಿ ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿದ್ದವು. ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ಸಿನಿಮಾ ಯಾವುದೆಂದು ಹೇಳ್ತಾರೆ. ಆದ್ರೆ ಇವು ಎಲ್ಲ ಕೂಡ ಸುಳ್ಳಾಗಿತ್ತು.
ಇದನ್ನು ಓದಿ: 2ನೇ ಮದ್ವೆಯಾದ ಮೋಹನ್ ಬಾಬು ಪುತ್ರ ಮಂಚು ಮನೋಜ್; ಹುಡುಗಿ ಯಾರು?
ಸದರ್ಶನವೊಂದರಲ್ಲಿ ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರು 6-7 ವರ್ಷದಿಂದ KGF ಸಿನಿಮಾ ಮಾಡುತ್ತಿದ್ದೇವೆ. 2 ಪಾರ್ಟ್ಗಳು ಬಂದಿವೆ. ಮೂರು ಪಾರ್ಟ್ ಬರಲಿವೆ. ಆದರೆ KGF- 3 ಬಗ್ಗೆ ಮುಂದಿನ ದಿನಗಳಲ್ಲಿ ಯಶ್ ಅವರೇ ಅನೌನ್ಸ್ ಮಾಡಲಿದ್ದಾರೆ ಎಂದಿದ್ದರು. ಈ ಬಗ್ಗೆ ಏನಾದ್ರೂ ಮಾಹಿತಿ ನೀಡಲಿದ್ದಾರಾ ಯಶ್ ಎಂಬುದು ಫ್ಯಾನ್ಸ್ಗಳ ಕುತೂಹಲ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ
Leave a Review