ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ರಾಜಕಾರಣಿಗಳ ಲೆಕ್ಕಚಾರವಾಗಿದರೆ ಶ್ರೀಕಾಳಿಕಾಂಭ ಚೌಡೇಶ್ವರಿ ದೇವಿ ಸುಧಾಕರ್ ಗೆಲುವಿನ ಭವಿಷ್ಯ ನುಡಿದಂತೆ ಗೆದ್ದು ಬಿಗಿದ ಬೆನ್ನಲ್ಲೇ ಸುಧಾಕರ್ ತಂದೆ ಕೇಶವರೆಡ್ಡಿ ಹಾಗೂ ಬಿಜೆಪಿ ಮುಖಂಡರುಗಳು ಕೆ.ವಿ. ನಾಗರಾಜ್, ಆನಂದ್ ರೆಡ್ಡಿ ಬಾಬು, ಇನ್ನು ಹಲವಾರು ಮುಖಂಡರು ಬಾದಾಮಿ ಅಮಾವಾಸ್ಯೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಭಾರಿ ಸುಧಾಕರ್ ಗೆಲ್ಲುವುದು ಸುಲಭವಲ್ಲ, ತೀವ್ರ ಪೈಪೋಟಿ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರೆದಾಡಿತ್ತು. ಅದರೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಜೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಾಳಿಕಾಂಭ ಮತ್ತು ಚೌಡೇಶ್ವರಿ ದೇವಿಯ ಸನ್ನಿದಿಯಲ್ಲಿ ಜೂನ್ ಎರಡರಂದು ಸುಧಾಕರ್ ಗೆಲುವಿಗಾಗಿ ಹೋಮ ಹವನ ಮಾಡಿ ದೇವಾಲಯದ ಮುಖ್ಯ ಅರ್ಚಕರು ಮತ್ತು ಶಿಲ್ಪಿ ಶ್ರಿ ಸುಬ್ರಮಣ್ಯ ಸ್ವಾಮಿಗಳು ದೇವರ ಬಳಿ ಸುಧಾಕರ್ ಗೆಲುವಿನ ಅಪ್ಪಣೆ ಕೇಳಿದಾಗ ದೇವಿ ಗೆಲುವಿನ ಸೂಚನೆ ನೀಡಿದರು.
ಅಂದು ಗೆಲುವಿನ ಭವಿಷ್ಯ ನುಡಿದಿದ್ರು ಅದರಂತೆ ಡಾ.ಕೆ. ಸುಧಾಕರ್ ಲೋಕಸಭಾ ಚುನಾವಣೆಯಲ್ಲಿ ಒಂದು ವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಹಿಮೆಯುಳ್ಳಾ ಶ್ರೀ ಕಾಳಿಕಾಂಭ ಮತ್ತು ಚೌಡೇಶ್ವರಿ ದೇವಿ ಕೊಟ್ಟ ಮಾತಿನಂತೆ ಸುಧಾಕರ್ ಗೆಲವು ಕಂಡಿದ್ದಾರೆ.ಹಾಗಾಗಿ ಗುರುವಾರ ಬಾದಾಮಿ ಅಮಾವಾಸ್ಯೆಯಂದು ದೇವಾಲಯದಲ್ಲಿ ಸುಧಾಕರ್ ಅವರಿಗೆ ಅ ದೇವರು ಸಾರ್ವಜನಿಕರ ಪರ ಮತ್ತಷ್ಟು ಕೆಲಸ ಮಾಡಲಿ ಎಂದು ವಿಶೇಷ ಹೋಮ ಹವನ ಮಾಡಿದ್ದಾರೆ.
ಇನ್ನೂ ಶ್ರೀ ಕಾಳಿಕಾಂಭ ಮತ್ತು ಚೌಡೇಶ್ವರಿ ದೇವಿ ಸೂಚನೆಯಂತೆ ಸುಧಾಕರ್ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದು.ದೇವಿಯ ಪವಾಡಕ್ಕೆ ಮನಸೋತ ಬಿಜೆಪಿ ಜೆಡಿಎಸ್ ಮುಖಂಡರು,ಕಾರ್ಯಕರ್ತರು ಬಾದಾಮಿ ಅಮಾವಾಸ್ಯೆಯಂದು ಶ್ರೀ ಕಾಳಿಕಾಂಭ ಮತ್ತು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ಕೊಟ್ಟು ಹೋಮದಲ್ಲಿ ಪೂರ್ಣಾವತಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಭವಿಷ್ಯದಂತೆ ಸುಧಾಕರ್ ಗೆಲುವು ಕಂಡಿದ್ದಾರೆ ವಿಶೇಷವಾಗಿ ಸುಬ್ರಮಣ್ಯ ಸ್ವಾಮಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನ ಅಭಿವೃದ್ಧಿಯತ್ತ ಸಾಗಿಸಿ ಜನರ ಮೆಚ್ಚುಗೆ ಪಾತ್ರರಾಗಿದ್ದ ಸುಧಾಕರ್ ಗೆ ಅನಿರೀಕ್ಷಿತ ಸೋಲಾಗಿತ್ತು ಅವರು ನೊಂದಿದರು ಈಗ ಮತ್ತೊಮ್ಮೆ ಹೆಚ್ಚಿನ ಲೀಡ್ ಪಡೆದು ಸಂಸದರಾಗಿ ಆಯ್ಕೆ ಆಗಿದ್ದು ಇಡೀ ಕ್ಷೇತ್ರದ್ಯಾಂತ ಸಂತೋಷದ ವಾತಾವರಣ ನಿರ್ಮಾಣ ಆಗಿದೆ ಎಂದು ಮುಖಂಡರು ಇದೇ ಸಂದರ್ಭದಲ್ಲಿ ನುಡಿದರು.
ಒಟ್ಟಾರೆ ಒಂದಾಲ್ಲ ಒಂದು ಪವಾಡಕ್ಕೆ ಹೆಸರುವಾಸಿಯಾಗಿರುವ ಈ ಸನ್ನಿಧಿ ಮೊನ್ನೆ ನಡೆದ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಶ್ರೀ ಕಾಳಿಕಾಂಭ ಮತ್ತು ಚೌಡೇಶ್ವರಿ ದೇವಿಯ ಸೂಚನೆಯಂತೆ ಸುಧಾಕರ್ ಗೆಲುವು ಕಂಡಿದ್ದು ಸಾರ್ವಜನಿಕರು ಆಶ್ಚರ್ಯ ಕೀಡಾಗಿದ್ದಾರೆ.ಈ ಸಂದರ್ಭದಲ್ಲಿ ಎಸ್ ಆರ್ ಎಸ್ ದೇವರಾಜ್, ಯತೀಶ್, ಕೇಶವ, ಮುದ್ದೇನಹಳ್ಳಿ ಶಿವಕುಮಾರ್, ಸಂತೋಷ್ ರಾಜು, ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.