ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತವು ಇಂದು ಮುಂಜಾನೆ ಪ್ರಾರಂಭವಾಗಿದ್ದು, ರಾಜ್ಯದ ೨೪೩ ಕ್ಷೇತ್ರಗಳ ಪೈಕಿ ೧೨೧ ಕ್ಷೇತ್ರಗಳಲ್ಲಿ ೩.೭೫ ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಮತದಾನದ ಶೇಕಡಾವಾರು ೨೫.೧೧% ರಷ್ಟಿದ್ದು, ಬೇಗುಸರಾಯ್ ಜಿಲ್ಲೆಯಲ್ಲಿ (೩೦.೩೭%) ಗರಿಷ್ಠ ಮತದಾನ ದಾಖಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಪಾಟ್ನಾ ಜಿಲ್ಲೆಯಲ್ಲಿ ಇದುವರೆಗೆ ಅತಿ ಕಡಿಮೆ ಮತದಾನವಾಗಿದ್ದು, ೨೩.೭೧%.
. ೨೦೨೦ ರ ಚುನಾವಣೆಯಲ್ಲಿ ಈ ಸ್ಥಾನಗಳಲ್ಲಿ ೬೩ ಸ್ಥಾನಗಳನ್ನು ಗೆದ್ದಿದ್ದ ಮಹಾಘಟಬಂಧನ್ಗೆ ಈ ಹಂತವು ವಿಶೇಷವಾಗಿ ಮಹತ್ವದ್ದಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯುತ್ತಿರುವುದರಿಂದ ಆಡಳಿತವು ಪ್ರತಿ ಮತಗಟ್ಟೆಯಲ್ಲಿ ಸಶಸ್ತç ಪಡೆಗಳನ್ನು ನಿಯೋಜಿಸಿ, ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.ಈ ಹಂತದಲ್ಲಿ ಹಲವಾರು ಉನ್ನತ ನಾಯಕರು ಕಣದಲ್ಲಿದ್ದಾರೆ, ಅವರಲ್ಲಿ ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ಸರ್ಕಾರದಲ್ಲಿರುವ ಒಂದು ಡಜನ್ಗೂ ಹೆಚ್ಚು ಬಿಜೆಪಿ ಮತ್ತು ಜೆಡಿಯು ಸಚಿವರು, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದ್ದಾರೆ. ಯುವ ಜಾನಪದ ಗಾಯಕಿ ಮೈಥಿಲಿ ಠಾಕೂರ್ (ಬಿಜೆಪಿ-ಅಲಿಗಂಜ್), ಮತ್ತು ಭೋಜ್ಪುರಿ ಸೂಪರ್ಸ್ಟಾರ್ಗಳಾದ ಖೇಸರಿ ಲಾಲ್ ಯಾದವ್ (ಆರ್ಜೆಡಿ-ಛಪ್ರಾ) ಮತ್ತು ರಿತೇಶ್ ಪಾಂಡೆ (ಜನ್ ಸುರಾಜ್ ಪಾರ್ಟಿ – ಕಾರ್ಗಹರ್) ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಸ್ಥಾನಗಳಲ್ಲಿ ಪ್ರತಿ ಸ್ಥಾನಕ್ಕೆ ಸರಾಸರಿ ೧೧ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಮುಜಫರ್ಪುರ ಮತ್ತು ಕುಧ್ನಿಯಲ್ಲಿ ಗರಿಷ್ಠ ೨೦ ಅಭ್ಯರ್ಥಿಗಳು ಮತ್ತು ಭೋರೆ, ಪರ್ಬಟ್ಟಾ, ಅಲೌಲಿಯಲ್ಲಿ ಕನಿಷ್ಠ ೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ ಒಟ್ಟು ೪೫,೩೪೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಬೂತ್ನಲ್ಲಿ ಸಶಸ್ತç ಪಡೆಗಳನ್ನು ನಿಯೋಜಿಸಲಾಗುವುದು. ಪ್ರಧಾನ ಕಚೇರಿಯಿಂದ ನೇರ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ಎಲ್ಲಾ ಬೂತ್ಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ಬಾರಿ, ಮೊದಲ ಹಂತದಲ್ಲಿ ಹಲವಾರು ಪ್ರಮುಖ ಸ್ಪರ್ಧೆಗಳು ನಡೆಯಲಿವೆ. ೨೫ ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್ಜೆಡಿ ನಡುವೆ ನೇರ ಸ್ಪರ್ಧೆ ಇದೆ. ೧೨ ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದರೆ, ೩೪ ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್ಜೆಡಿ ಸ್ಪರ್ಧಿಸುತ್ತಿವೆ. ೧೧ ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುತ್ತಿದೆ, ಮತ್ತು ೧೪ ಸ್ಥಾನಗಳಲ್ಲಿ ಎಲ್ಜೆಪಿ (ಆರ್) ಮತ್ತು ಆರ್ಜೆಡಿ ಸ್ಪರ್ಧಿಸುತ್ತಿವೆ, ಈ ಪೈಕಿ ೧೨ ಸ್ಥಾನಗಳಲ್ಲಿ ನೇರ ಸ್ಪರ್ಧೆಗಳಿವೆ.
ಸಿಪಿಐ-ಎಂಎಲ್ ಏಳು ಸ್ಥಾನಗಳಲ್ಲಿ ಜೆಡಿಯು, ಐದು ಸ್ಥಾನಗಳಲ್ಲಿ ಬಿಜೆಪಿ ಮತ್ತು ಎರಡು ಸ್ಥಾನಗಳಲ್ಲಿ ಎಲ್ಜೆಪಿ (ಆರ್) ವಿರುದ್ಧ ಸ್ಪರ್ಧಿಸಲಿದೆ. ವಿಐಪಿ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಮತ್ತು ಒಂದು ಸ್ಥಾನ ಜೆಡಿಯು ವಿರುದ್ಧ ಸ್ಪರ್ಧಿಸುತ್ತಿದೆ. ಸಿಪಿಐ(ಎಂ) ಮತ್ತು ಸಿಪಿಐ ಕೂಡ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ೧೨೧ ಸ್ಥಾನಗಳಿಗೆ ಮತದಾನಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ಬೂತ್ಗಳಲ್ಲಿ ಸಶಸ್ತç ಪಡೆಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕೆಲಸಕ್ಕಾಗಿ ಸುಮಾರು ನಾಲ್ಕೂವರೆ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಇದರಲ್ಲಿ ಕೇಂದ್ರ ಪಡೆಗಳ ೧೫೦೦ ಕಂಪನಿಗಳು ಸೇರಿವೆ. ಇದಲ್ಲದೆ, ೬೦ ಸಾವಿರಕ್ಕೂ ಹೆಚ್ಚು ಬಿಹಾರ ಪೊಲೀಸ್ ಸಿಬ್ಬಂದಿ-ಅಧಿಕಾರಿಗಳು, ೩೦ ಸಾವಿರ ಬಿಹಾರ ವಿಶೇಷ ಸಶಸ್ತç ಪೊಲೀಸರು, ೨೨ ಸಾವಿರ ಗೃಹರಕ್ಷಕರು, ೨೦ ಸಾವಿರ ತರಬೇತಿ ಕಾನ್ಸ್ಟೆಬಲ್ಗಳು ಮತ್ತು ಸುಮಾರು ೧.೫ ಲಕ್ಷ ಕಾವಲುಗಾರರನ್ನು ಸಹ ಚುನಾವಣಾ ಕೆಲಸಕ್ಕಾಗಿ ನಿಯೋಜಿಸಲಾಗಿದೆ.
ಚುನಾವಣೆಯ ಸಮಯದಲ್ಲಾಗುವ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬಿಹಾರ ಪೊಲೀಸರು ಕ್ಯೂಆರ್ಟಿ ತಂಡವನ್ನು ಸಹ ರಚಿಸಿದ್ದಾರೆ. ಈ ತಂಡವು ಚುನಾವಣೆ ಸಮಯದಲ್ಲಿ ಬಂದೊದಗುವ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುತ್ತಾರೆ. ಈ ತಂಡದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಂಖಿS) ಮತ್ತು ವಿಶೇಷ ಕಾರ್ಯಪಡೆ (Sಖಿಈ) ಯ ಕಮಾಂಡೋಗಳು ಕೂಡ ಇರಲಿದ್ದಾರೆ.
ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಪಡೆದ ಪೊಲೀಸರು ಮತ್ತು ರಾಷ್ಟಿçÃಯ ಭದ್ರತಾ ಸಿಬ್ಬಂದಿ ಯ ಸೈನಿಕರನ್ನು ಒಳಗೊಂಡ ವಿಐಪಿ ಭದ್ರತಾ ಪೂಲ್ ಅನ್ನು ರಚಿಸಲಾಗಿದೆ. ಡಯಾರಾ ಪ್ರದೇಶದಲ್ಲಿ ಎಸ್ಟಿಎಫ್ ಜೊತೆಗೆ ಅಶ್ವಾರೋಹಿ ದಳವನ್ನು ನಿಯೋಜಿಸಲಾಗಿದೆ. ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಾಗಿನಿAದ ಶಸ್ತಾçಸ್ತç ಕಾಯ್ದೆಯಡಿ ೧ ಸಾವಿರ ಜನರನ್ನು ಸುಮಾರು ೮೦೦ ಅಕ್ರಮ ಶಸ್ತಾçಸ್ತçಗಳೊಂದಿಗೆ ಬಂಧಿಸಲಾಗಿದೆ. ಚುನಾವಣೆ ಮುಗಿದ ಬಳಿಕ ತನಿಖೆ ನಡೆಸಲಾಗುತ್ತದೆ.



